ಬಂಟ್ವಾಳ: ಜೇಸಿ ಸಂಸ್ಥೆಯಿಂದ ವನಮಹೋತ್ಸವ

Update: 2016-07-08 18:13 GMT

ಬಂಟ್ವಾಳ, ಜು. 8: ಪರಿಸರ ಸಂರಕ್ಷಣೆಯ ಬಗ್ಗೆ ಯುವ ಸಮುದಾಯ ಜಾಗೃತಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜೇಸಿ ಸಂಸ್ಥೆ ಶಾಲೆಗಳಲ್ಲಿ ವನಮಹೋತ್ಸವ ಆಚರಿಸುವ ಮೂಲಕ ವಿದಾರ್ಥಿಗಳಲ್ಲಿ ಪರಿಸರದ ಕಾಳಜಿ ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದು ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುದರ್ಶನ ಜೈನ್ ಹೇಳಿದರು.

ಅವರು ಜೇಸಿಐ ಬಂಟ್ವಾಳದ ವತಿಯಿಂದ ಪಂಜಿಕಲ್ಲು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜೇಸಿ ಅಧ್ಯಕ್ಷ ಸಂತೋಷ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ ಮರಗಳ ನಾಶದಿಂದ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು ಇದು ಪ್ರಕೃತಿ ನಾಶದ ದುಷ್ಪರಿಣಾಮವಾಗಿದೆ. ಮೋಪು, ಪಿಠೋಪಕರಣಗಳಿಗೆ ಮರಗಳ ಬಳಕೆಯನ್ನು ಕಡಿಮೆ ಮಾಡಿ ಅದರ ಬದಲಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಂಡರೆ ಮಾತ್ರ ಪರಿಸರ ಉಳಿಯಲಿದೆ ಎಂದರು.

ಜೇಸಿಐ ಬಂಟ್ವಾಳದ ಕಾರ್ಯದರ್ಶಿ ಡಾ. ಬಾಲಕೃಷ್ಣ ಅಗ್ರಬೈಲು, ಕಾರ್ಯಕ್ರಮ ಸಂಯೋಜಕ ಮನೋಹರ ನೇರಂಬೋಳು, ಸ್ಥಳದಾನಿ ದೇವಪ್ಪ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಸ್ವಾಗತಿಸಿ, ಸಹ ಶಿಕ್ಷಕ ಇಮ್ತಿಯಾಝ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News