ಬಿಜೆಪಿಯ ಪ್ರತಿಭಟನೆ ಪ್ರಹಸನ: ಸಿಪಿಎಂ

Update: 2016-07-09 12:39 GMT

ಮಂಗಳೂರು, ಜು. 9: ಪೊಲೀಸ್ ಅಧಿಕಾರಿಗಳ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಜುಲೈ 11ರಂದು ಹಮ್ಮಿಕೊಂಡಿರುವ ಪ್ರತಿಭಟನೆ ಒಂದು ಪ್ರಹಸನವೇ ಸರಿ ಎಂದು ಸಿಪಿಎಂ ಬಣ್ಣಿಸಿದೆ.

ಮಂಗಳೂರು ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯನ್ನು ಮುಂದಿಟ್ಟು ಪ್ರತಿಭಟನೆ ಮಾಡುವ ಬಿಜೆಪಿ ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ ಆತ್ಮಹತ್ಯೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಸಂಘ ಪರಿವಾರದ ಕ್ರಿಮಿನಲ್ ನಾಯಕನೋರ್ವನಿಂದ ಕ್ರಿಮಿನಲ್ ಕೃತ್ಯಕ್ಕೆ ಇಳಿಸಲ್ಪಟ್ಟ ಪೊಲೀಸ್ ಅಧಿಕಾರಿಯ ಬಗ್ಗೆ ಮಾತನಾಡಲು ತಯಾರಿಲ್ಲದ ಬಿಜೆಪಿಯ ಪ್ರತಿಭಟನೆಗೆ ಯಾರೂ ಕಿವಿಕೊಡಬೇಕಾಗಿಲ್ಲ.ಪೊಲೀಸ್ ಅಧಿಕಾರಿಗಳನ್ನು ತಮ್ಮ ದಾಳವಾಗಿ ಉಪಯೋಗಿಸಿ ನಂತರ ಎತ್ತಿ ಎಸೆಯುವ ಬಿಜೆಪಿಯು, ನಮೋ ಬ್ರಿಗೇಡ್ ಸಂಚಾಲಕ ನರೇಶ್ ಶೆಣೈ ಎಂಬ ಕ್ರಿಮಿನಲ್ ನಾಯಕ ಬಾಳಿಗರ ಹತ್ಯೆಯನ್ನು ಮಾಡಿಸಿರುವ ಬಗ್ಗೆ ತನ್ನ ನಿಲುವನ್ನೇ ಸ್ಪಷ್ಟಪಡಿಸಿಲ್ಲ. ಮಾತ್ರವಲ್ಲದೆ ಆತನನ್ನು ಬಂಧಿಸದಂತೆ ವಿಫಲ ಪ್ರಯತ್ನ ನಡೆಸಿರುವ ಬಿಜೆಪಿಗೆ, ಈ ಪ್ರತಿಭಟನೆ ನಡೆಸುವ ನೈತಿಕತೆ ಇದೆಯೇ? ಎಂದು ಸಿಪಿಎಂ ದ.ಕ. ಜಿಲ್ಲಾ ಸಮಿತಿ ಪ್ರಶ್ನಿಸಿದೆ.

ಬಿಜೆಪಿಯ ಈ ರೀತಿಯ ಜನಪರತೆಯ ಸೋಗಿಗೆ ಯಾರೂ ಮರುಳಾಗಬೇಕಿಲ್ಲವೆಂದು ಸಿಪಿಎಂ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ತನಿಖೆಯೊಂದಿಗೆ ಡಿವೈಎಸ್ಪಿ  ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆ ಹಾಗೂ ವಿನಾಯಕ ಬಾಳಿಗ ಕೊಲೆ ತನಿಖೆಯನ್ನು ಸಮರ್ಪಕವಾಗಿ ನಡೆಸಬೇಕೆಂದು ಸಿಪಿಎಂ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News