ಭಟ್ಕಳ: ಲಯನ್ಸ್ ಕ್ಲಬ್ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Update: 2016-07-10 16:45 GMT

ಭಟ್ಕಳ,ಜು.10: ಮುರ್ಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಯಶಸ್ವೀಯಾಗಿ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರತಿಜ್ಞಾ ದೀಕ್ಷೆಯನ್ನು ಬೋಧಿಸಿದ ಎಂ.ಜೆ.ಎಫ್ ಲಯನ್ ಡಾ.ಎಂ.ಕೆ.ಭಟ್, ಸೊರಬ ಅವರು ಮಾತನಾಡುತ್ತಾ ಇಲ್ಲಿ ಎಲ್ಲಾ ಲಯನ್ಸ್ ಸದಸ್ಯರೂ ಕೂಡಾ ಸಮಾನರು. ನಮ್ಮಲ್ಲಿ ಯಾವುದೇ ಬೇಧಭಾವ, ಬಡವ, ಶ್ರೀಮಂತ ಎನ್ನುವ ಕಲ್ಪನೆಯೇ ಬರುವುದಿಲ್ಲ. ಪ್ರತಿ ವರ್ಷದ ಅಧಿಕಾರದ ಹಸ್ತಾಂತರಕ್ಕಾಗಿ ಮಾತ್ರ ಪದಾಧಿಕಾರಿಗಳ ಆಯ್ಕೆ ಅವರಿಗೆ ಯಾವುದೇ ಅಧಿಕಾರವಿಲ್ಲ, ಆದರೆ ಜವಾಬ್ದಾರಿ ಇರುತ್ತದೆ ಎಂದರು.

ಮಾನವರಲ್ಲಿ ಸಹಜವಾಗಿ ಅಸಮಾತನೆ ಇರುತ್ತದೆ. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಯನ್ನೂ ಸಹ ಮುಖ್ಯ ವಾಹಿನಿಗೆ ತರುವುದು, ಬಡವ, ಅಸಹಾಯಕರಿಗೆ ಸಹಾಯ ಮಾಡಿ ಅವರೂ ಕೂಡಾ ಸಮಾಜದಲ್ಲಿ ಉತ್ತಮ ಜೀವನ ಮಾಡಬೇಕು ಎನ್ನುವುದೇ ನಮ್ಮ ಸೇವೆಯ ಗುರಿಯಾಗಿದ್ದು ನಮ್ಮ ಸಂಸ್ಥೆಯು ಸೇವಾ ಸಂಸ್ಥೆಯಾಗಿರುವುದರಿಂದ ಪ್ರತಿಯೋರ್ವರೂ ಸೇವಾ ಮನೋಭಾವನೆಯಿಂದಲೇ ಇಲ್ಲಿ ಸದಸ್ಯರಾಗುತ್ತಾರೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಲಿಯೋ ಜಿಲ್ಲಾಧ್ಯಕ್ಷರಾದ ಲಯನ್ ಸ್ಯಾಮಿಯುಲ್ ಡಯಾಸ್ ಗೋವಾ ಅವರು ಲಿಯೋ ಕ್ಲಬ್ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋದಿಸುತ್ತಾ ಲಿಯೋ ಕ್ಲಬ್ ಸದಸ್ಯರು ಮುಂದಿನ ನಾಯಕರುಗಳು. ನಮ್ಮ ದೇಶದಲ್ಲಿ ಯುವ ಶಕ್ತಿಯೇ ಹೆಚ್ಚಿದ್ದು ಅದೊಂದು ದೇಶದ ಆಸ್ತಿಯಾಗಿದೆ.

ಮುಖ್ಯವಾಗಿ ಲಿಯೋ ಕ್ಲಬ್‌ನಲ್ಲಿ ನಾಯಕನಾಗುವ ಅರ್ಹತೆಯನ್ನು ನಾವು ಕಲಿಸುತ್ತೇವೆ ಎಂದರು. ನೂತನ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ಲಯನ್ ಡಾ. ವಾದಿರಾಜ ಭಟ್ಟ ಮಾತನಾಡಿ ಲಯನ್ಸ್ ಕ್ಲಬ್‌ನ ಮುಂದಿನ ಕಾರ್ಯಕ್ರಮಗಳ ಕುರಿತು ವಿವರಿಸುತ್ತಾ ಈ ಭಾಗದಲ್ಲಿ ತುರ್ತು ಚಿಕಿತ್ಸೆಗೆ ಹಲವರು ತೀವ್ರ ಕಷ್ಟ ಪಡುತ್ತಿರುವುದನ್ನು ಕಂಡಿದ್ದು ತುರ್ತು ಚಿಕಿತ್ಸಾ ಫಂಡ್ ಮಾಡಿ ಅದರ ಮೂಲಕ ಸಹಾಯ ಮಾಡುವುದಾಗಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಶ್ರೀ ಅಳ್ವೇಕೋಡಿ ದುರ್ಗಾಪರಮೇಶ್ವರ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಮಾತನಾಡಿದರು. ಶ್ಯಾಮರಾವ್ ದತ್ತಿನಿಧಿ ಪ್ರಶಸ್ತಿ ಪಡೆದ ಪತ್ರಕರ್ತ ರಾಧಾಕೃಷ್ಣ ಭಟ್ಟ, ಅವರನ್ನು ಶಾಲು ಹೊದಿಸಿ, ಹಣ್ಣು, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಸಿ.ಇ.ಟಿ.ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನೂತನ ಸದಸ್ಯರಾಗಿ ಹಿರಿಯರಾದ ಎ.ಎನ್. ಶೆಟ್ಟಿ, ಶಿಕ್ಷಣ ತಜ್ಞ ನಾಗೇಶ ಮಡಿವಾಳ ಅವರನ್ನು ಸ್ವಾಗತಿಸಲಾಯಿತು. ಶಿವಾನಂದ ದೈಮನೆ ಪ್ರಾರ್ಥಿಸಿದರು. ಲಿಯೋ ಕ್ಲಬ್ ಅಧ್ಯಕ್ಷ ರಾಹುಲ್ ರಾವ್ ಸ್ವಾಗತಿಸಿದರು. ಜಿತೇಂದ್ರ ಹೆಗಡೆ, ಸುರೇಶ ನಾಯ್ಕ ವರದಿ ವಾಚಿಸಿದರು. ಹರಿಪ್ರಸಾದ ಕಿಣಿ, ಡಾ. ಸುನಿಲ್ ಜತ್ತನ್, ತಿಲಕ್ ರಾವ್ ಪರಿಚಯಿಸಿದರು. ಎಂ.ವಿ. ಹೆಗಡೆ ಹಾಗೂ ಕೃಷ್ಣ ಹೆಗಡೆ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News