ಭಟ್ಕಳ : ಅಕ್ರಮ ಮದ್ಯ ವಶ

Update: 2016-07-10 17:35 GMT

ಭಟ್ಕಳ,ಜು.10 ಇತ್ತೀಚಿನ ದಿನಗಳಲ್ಲಿ ಗೋವಾದಿಂದ ಕರ್ನಾಟಕಕ್ಕೆ ಬರುವ ಅಕ್ರಮ ಮದ್ಯವು ತುಂಬಾ ಹೆಚ್ಚಾಗಿರುವ ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ಕಾರವಾರ ಜಿಲ್ಲಾ ರೈಲ್ವೆ ರಕ್ಷಣಾ ಪಡೆಯ ಸಹಾಯಕ ಭದ್ರತಾ ಆಯುಕ್ತರಾದ ಪ್ರವೀಣ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ಉಡುಪಿ ರೈಲ್ವೆ ವೃತ್ತ ನಿರೀಕ್ಷಕರಾದ ಶಿವರಾಮ ರಾಥೋಡ್ ಅವರ ನೇತ್ರತ್ವದಲ್ಲಿ ಕಾರವಾರ, ಭಟ್ಕಳ, ಉಡುಪಿಯ ರೈಲ್ವೆ ಸಿಬ್ಬಂದಿಗಳ ತಂಡದೊಂದಿಗೆ ಕ್ಷಿಪ್ರಗತಿಯ ಕಾರ್ಯಾಚರಣೆ ಮಾಡಿದ್ದು, ಅಂದಾಜು ಮೊತ್ತ 25000 ರೂ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಶುಕ್ರವಾರದಂದು ಬೆಳಿಗ್ಗೆ 6.10 ಸಮಯಕ್ಕೆ ಗೋವಾದಿಂದ ಮಂಗಳೂರು ಮಾರ್ಗವಾಗಿ ಸಾಗುವ ಮತ್ಸ್ಯಗಂಧ ಎಕ್ಸಪ್ರೆಸ್ ರೈಲು ಭಟ್ಕಳದ ರೈಲ್ವೆ ನಿಲ್ದಾಣಕ್ಕೆ ಬಂದಾಗ ಪರಿಶೀಲಿಸಿದಾಗ ಮದ್ಯ ಪತ್ತೆಯಾಗಿದೆ.ಒಟ್ಟು ಅಂದಾಜು ಮೊತ್ತ 25000 ರೂ ಮೌಲ್ಯ ಮದ್ಯ ವಶಪಡಿಸಿಕೊಂಡಿದ್ದಾರೆ.ಇವುಗಳಲ್ಲಿ 750 ಮಿಲೀ ಲೀಟರನ 160  ಬೊಟಲ್ ಹಾಗೂ 180 ಮಿಲೀ ಲೀಟರ್‌ನ 105 ಬೊಟಲ್‌ಯನ್ನು ವಶಪಡಿಸಿಕೊಂಡಿದ್ದಾರೆ. ಮದ್ಯ ಕಾರ್ಯರಚಣೆಯಲ್ಲಿ ಕಾರವಾರ, ಭಟ್ಕಳ, ಉಡುಪಿಯ ರೈಲ್ವೆ ಸಿಬ್ಬಂದಿಗಳಾದ ಪ್ರವೀಣ, ಅಜೇಶ್, ವೀನು ಹಾಗೂ ಪ್ರಮೋದ ತಂಡದಲ್ಲಿದ್ದರು. ನಂತರ ವಶಕ್ಕೆ ಪಡೆದ ಎಲ್ಲಾ ಅಕ್ರಮ ಮದ್ಯಗಳನ್ನು ಅಬಕಾರಿ ಇಲಾಖೆಯ ವಶಕ್ಕೆ ನೀಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News