ಬದುಕಿನ ಎಲ್ಲ ರಂಗಗಳಲ್ಲಿ ಸಹಕಾರ ತತ್ವವನ್ನು ಅಳವಡಿಸಿಕೊಳ್ಳಿ: ಸಚಿವ ರಮನಾಥ ರೈ

Update: 2016-07-10 17:42 GMT

ವಿಟ್ಲ,ಜು.10: ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಸ್ಥೆಯೊಂದು ಪಾದಾರ್ಪಣೆ ಮಾಡುತ್ತಿರುವುದು ಜನರಿಗೆ ಮತ್ತು ಸಹಕಾರಿ ಸಂಘಕ್ಕೆ ಪ್ರಯೋಜನವಾಗಿದೆ. ಸಹಕಾರಿ ಕ್ಷೇತ್ರದಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಿದೆ. ಸಹಕಾರಿ ಕ್ಷೇತ್ರವಿಂದು ಹಲವು ರೀತಿಯಲ್ಲಿ ಜನಸಾಮಾನ್ಯರ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ಸಹಕಾರಿ ಸಂಘದ ಕೇಂದ್ರ ಕಚೇರಿ ಮತ್ತು ಎಲ್ಲಾ ಶಾಖೆಗಳನ್ನು ನಾನೇ ಉದ್ಘಾಟಿಸುತ್ತಿರುವುದು ವಿಶೇಷ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

 ಬಂಟ್ವಾಳ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘದ 6ನೆ ಶಾಖೆಯನ್ನು ಸಾಲೆತ್ತೂರು ಗ್ರಾಮದ ರಾಜೀವ್ ಗಾಂಧಿ ಸೇವಾ ಕೇಂದ್ರ ಸಭಾಭವನದಲ್ಲಿ ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಬದುಕಿನ ಎಲ್ಲಾ ರಂಗಗಳಲ್ಲಿ ಸಹಕಾರ ತತ್ವವನ್ನು ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಮೊಳಹಳ್ಳಿ ಶಿವರಾಯರಿಂದ ಸಹಕಾರಿ ಕ್ರಾಂತಿಯಾಗಿ ಅನೇಕ ಸಹಕಾರಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆ ನೀಡಿದೆ. ಇಂದು ಮಾನವನ ಬದುಕಿನ ಎಲ್ಲಾ ರೀತಿಯ ವೃತ್ತಿ ಸೇವೆಗೂ ಸಹಕಾರಿ ಸಂಘಗಳು, ಸಮಾಜಕ್ಕೊಂದು ಸಹಕಾರಿ ಸಂಸ್ಥೆಗಳು ಬೆಳೆದು ಬರುವ ಮೂಲಕ ಗಣನೀಯ ಕೊಡುಗೆ ನೀಡಿದೆ ಎಂದರು.

ರಾಜ್ಯದ ಉತ್ತಮ ಸಹಕಾರಿ ಸಂಘದ ಅಧ್ಯಕ್ಷ ಎಂ. ಸುಭಾಶ್ಚಂದ್ರ ಜೈನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಪ್ರಸ್ತಾವನೆಗೈದರು. ಈ ಸಂದರ್ಭ ಮಾತನಾಡಿದ ಅವರು, ಸಂಸ್ಥೆಗೆ 20 ವರ್ಷ ತುಂಬುವ ಹೊತ್ತಿನಲ್ಲಿ ಹತ್ತು ಶಾಖೆಗಳನ್ನು ಹೊಂದುವ ಗುರಿಯಿದ್ದು, ತಾಲೂಕಿನ ಮುಲಾರಪಟ್ನ, ಪೊಳಲಿ, ಸಜಿಪ, ಕಾವಳಕಟ್ಟೆಗಳಲ್ಲಿ ಶಾಖೆ ತೆರೆಯಲು ಚಿಂತಿಸಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದರು.

ಜಿ.ಪಂ. ಸದಸ್ಯ ಎಂ.ಎಸ್. ,ಮುಹಮ್ಮದ್ ಪ್ರಥಮ ಠೇವಣಿ ಪತ್ರವನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಗ್ರಾ.ಪಂ. ಸದಸ್ಯ ದೇವದಾಸ ಶೆಟ್ಟಿ ಪಾಲ್ತಾಜೆ, ಕುಲ್ಯಾರು ನಾರಾಯಣ ಶೆಟ್ಟಿ, ತಾ.ಪಂ. ಮಾಜಿ ಸದಸ್ಯ ಮಾಧವ ಎಸ್. ಮಾವೆ, ಸಾಲೆತ್ತೂರು ಶ್ರೀ ಸದಾಶಿವ ದೇವಸ್ಥಾನದ ಅರ್ಚಕ ನಾರಾಯಣ ಬಳ್ಳೂಕರಾಯ, ಗ್ರಾ.ಪಂ. ಉಪಾಧ್ಯಕ್ಷೆ ಯಮುನಾ ಗೌಡ, ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಶಿವರಾಮ ಶೆಟ್ಟಿ ಕೆ. ಬಾರೆಬೆಟ್ಟು, ಟಿ. ಕೃಷ್ಣ ಮಾರ್ಲ ಯಜಮಾನ ಅಗರಿ, ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೂರ್ಜೆಬೆಟ್ಟು ಬಾಲಕೃಷ್ಣ ರೈ, ಶಿವರಾಮ ರೈ ಕೊಲ್ಲಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಲೆತ್ತೂರು ವಲಯಾಧ್ಯಕ್ಷ ರಂಜಿತ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

ಸಾಲೆತ್ತೂರಿನಲ್ಲಿ ಶಾಖೆ ಆರಂಭಿಸಲು ಶ್ರಮಿಸಿದ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ ರೈ ಅಗರಿ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಕಟ್ಟಡ ನಿರ್ಮಾಪಕ ಸದಾಶಿವ ಗೌಡ, ಸೋಮನಾಥ ಪಾಲ್ತಾಜೆ ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್, ನಿರ್ದೇಶಕರಾದ ಬಿ. ಧರ್ಮೇಂದ್ರ, ಜೆ. ಗಜೇಂದ್ರ ಪ್ರಭು, ರಾಜೇಶ್ ಬಿ. ಬಿ. , ಸುರೇಶ್ ಕುಮಾರ್, ಸ್ವಪ್ನಾ ರಾಜ್, ಅನಿತಾ ರವೀಂದ್ರ, ವಿಜಯ ಕುಮಾರಿ ಇಂದ್ರ. ಶಾಖಾ ಪ್ರಬಂಧಕರಾದ ಮೋಹನ್ ಜಿ. ಮೂಲ್ಯ, ಸಪ್ನಾಚಂದ್ರಪ್ರಭ, ಸಂದೇಶ್ ಕುಮಾರ್ ಎಸ್., ಜಿತೇಶ್ ಕುಮಾರ್ ಜೈನ್, ಸದಾಶಿವ ಆರ್. ಪುತ್ರನ್ ಹಾಗೂ ಸಿಬ್ಭಂದಿಗಳು ಪಾಲ್ಗೊಂಡಿದ್ದರು. ನಿರ್ದೇಶಕರಾದ ದಿವಾಕರ ದಾಸ್ ಸ್ವಾಗತಿಸಿ, ಸುಧಾಕರ ಸಾಲ್ಯಾನ್ ವಂದಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News