ಕಾಪು ಕಾಲೇಜಿನಲ್ಲಿ ಎಂಕಾಂ ಕೋರ್ಸ್

Update: 2016-07-10 18:36 GMT

ಕಾಪು, ಜು.10: ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2016- 17ನೆ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಎಂ.ಕಾಂ. ಕೋರ್ಸ್‌ಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ದೊರೆತಿದೆ.
ಈ ಬಗ್ಗೆ ಸರಕಾರದಿಂದ ಅನುಮತಿ ದೊರಕಿರುವುದಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಸ್ಥಳೀಯ ಶಾಸಕ ವಿನಯಕುಮಾರ್ ಸೊರಕೆ ತಿಳಿಸಿದ್ದು, ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಪ್ರವೇಶಾತಿ ಬಯಸುವವರು ಕಾಲೇಜು ಕಚೇರಿ (ದೂ.ಸಂ.: 0820- 2551458)ಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News