ಶ್ರೀವಿಶ್ವಾಧಿರಾಜ ತೀರ್ಥರಿಂದ ಕ್ಷತ್ರಿಯ ಪೀಠಾರೋಹಣ,

Update: 2016-07-11 18:19 GMT

ಉಡುಪಿ, ಜು. 11: ಮಂಗಳೂರಿನ 34ರ ಹರೆಯದ ಇಂಜಿನಿಯರ್ ಭರತ್‌ರಾಜೇ ಅರಸ್‌ರಿಗೆ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಸೋಮವಾರ ಶ್ರೀಕೃಷ್ಣ ಮಠದಲ್ಲಿ ಸನ್ಯಾಸತ್ವ ದೀಕ್ಷೆ ನೀಡಿ, ಹೊಸದಾಗಿ ಸ್ಥಾಪಿಸಿದ ಕ್ಷತ್ರಿಯ ಪೀಠಕ್ಕೆ ಭಗವಂತ ಚಕ್ರವರ್ತಿಗಳಲ್ಲಿರುವ ರಾಜರಾಜೇಶ್ವರ ರೂಪದ ಹೆಸರಿಟ್ಟು ಅದಕ್ಕೆ ಪ್ರಥಮ ಯತಿಗಳಾಗಿ ಅವರಿಗೆ ಶ್ರೀವಿಶ್ವಾಧಿರಾಜ ತೀರ್ಥರು ಎಂದು ನಾಮಕರಣ ಮಾಡಿದರು. ಮಠದ ಪ್ರಧಾನ ಪುರೋಹಿತರಾದ ಗೋಪಾಲಕೃಷ್ಣ ಆಚಾರ್ಯರ ನೇತೃತ್ವದಲ್ಲಿ ಸನ್ಯಾಸ ಪೂರ್ವಭಾವಿ ಕಾರ್ಯಕ್ರಮಗಳು ಎರಡು ದಿನಗಳಿಂದ ನಡೆದು ಇಂದು ವಿವಿಧ ಧಾರ್ಮಿಕ ವಿಧಿವಿಧಾನಗಳ ಬಳಿಕ ಪೇಜಾವರ ಶ್ರೀಗಳಿಂದ ಸನ್ಯಾಸ ದೀಕ್ಷೆ ಬೋಧನೆ ಹಾಗೂ ನೂತನ ನಾಮಕರಣ ಕಾರ್ಯ ನಡೆದವು. ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾ ಧ್ಯಾಯ ಮಾರ್ಗದರ್ಶನ ಮಾಡಿದರು. ಈ ಸಂದರ್ಭ ಮಾತನಾಡಿದ ಶ್ರೀವಿಶ್ವಾಧಿರಾಜ ತೀರ್ಥರು, ಸುಖದ ಇಚ್ಛೆಯಿಂದ ಮಾಡಿದ ಕರ್ಮದಲ್ಲಿ ಅಜ್ಞಾನವಿದೆ. ಇದೇ ದು:ಖಕ್ಕೆ ಮೂಲ ಕಾರಣ. ಸ್ವಯಂನಾಶದಿಂದ ಜಗತ್ತಿನ ನಾಶ. ವೈಯಕ್ತಿಕ ಜೀವನದಿಂದ ಆಧ್ಯಾತ್ಮಿಕ ಜೀವನ ಕುಸಿದಿದ್ದು, ಲೌಕಿಕ ಶಿಕ್ಷಣಕ್ಕಿಂತ ಪಾರಂಪರಿಕ ಜ್ಞಾನದ ಅರಿವು ಪಡೆಯಲು ಸಾಧ್ಯವಾಗಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News