ಪ್ರೋತ್ಸಾಹಧನ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚನೆ

Update: 2016-07-12 18:37 GMT


 
ಮಂಗಳೂರು, ಜು.12: 2016-17ನೆ ಸಾಲಿನಲ್ಲಿ ಎಸೆಸೆಲ್ಸಿ/ ಪಿಯುಸಿ/ಪದವಿ/ಸ್ನಾ.ಕೋ. ಪದವಿಯಲ್ಲಿ ಕಲಿಯುತ್ತಿರುವ ಮತೀಯ ಅಲ್ಪಸಂಖ್ಯಾತ (ಮುಸ್ಲಿಮ್/ಕ್ರಿಶ್ಚಿಯನ್/ಜೈನ್) ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ಉತ್ತೇಜನ ನೀಡುವ ಸಲುವಾಗಿ ಪ್ರೋತ್ಸಾಹ ಧನ ಕಾರ್ಯಕ್ರಮದ ಅರ್ಜಿಯನ್ನು ಆ.31 ರೊಳಗೆ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮಂಗಳೂರು ಈ ಕಚೇರಿಗೆ ಸಲ್ಲಿಸುವಂತೆ ಸೂಚಿಸಲಾಗಿತ್ತು.
 ಪ್ರಸ್ತುತ ಎಲ್ಲಾ ಸ್ಕಾಲರ್‌ಶಿಪ್‌ಗಳಿಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ನಿರ್ದೇಶನಾಲಯದ ಸೂಚನೆ ಪ್ರಕಾರ ಉತ್ತೇಜನ (ಪ್ರೋತ್ಸಾಹ ಧನ) ಮಂಜೂರಾತಿಯನ್ನು ತಕ್ಷಣದಿಂದ ರದ್ದುಗೊಳಿಸಲಾಗಿದೆ. ಆನ್‌ಲೈನ್ ಮುಖಾಂತರ ಮಂಜೂರುಗೊಳ್ಳುವ ಸ್ಕಾಲರ್‌ಶಿಪ್‌ಗಳಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೆಂಗಳೂರು ಕಚೇರಿಯ ವೆಬ್ ಸೈಟ್ ಡಿಡಿಡಿ.ಜಟಟಞ.್ಚಟಞಗೆ ಲಾಗ್ ಇನ್ ಆಗಿ ಪ್ರಯೋಜನ ಪಡೆದುಕೊಳ್ಳುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News