ಎಂಡೋಸಲ್ಫಾನ್‌ಪೀಡಿತ ಪ್ರದೇಶಗಳಲ್ಲಿ ಮರು ಅಧ್ಯಯನ: ಮುಖ್ಯಮಂತ್ರಿ ಪಿಣರಾಯಿ

Update: 2016-07-13 18:51 GMT

ಕಾಸರಗೋಡು, ಜು.13: ಕಾಸರಗೋಡಿನ ಎಂಡೋ ಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಮರು ಅಧ್ಯಯನಕ್ಕೆ ರಾಜ್ಯ ಸರಕಾರ ತೀರ್ಮಾನಿಸಿದೆ ಎಂದು ಕೇರಳ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಈ ವಿಷಯ ತಿಳಿಸಿದರು.
ಎಂಡೋಸಲ್ಫಾನ್ ಕೀಟನಾಶಕ ಸಿಂಪಡಿಸಿರುವ ಎಲ್ಲ ಪ್ರದೇಶಗಳ ಮಣ್ಣು, ನೀರು ಹಾಗೂ ಅಗತ್ಯವಿರುವ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲ ಯದಲ್ಲಿ ತಪಾಸಣೆಗೊಳಪಡಿಸಲಾಗುವುದು. ಎಂಡೋ ಸಲ್ಫಾನ್ ಕೀಟನಾಶಕದ ಅಂಶ ಇನ್ನೂ ಮಣ್ಣು ಹಾಗೂ ನೀರಿನಲ್ಲಿ ಅಡಕವಾಗಿದೆಯೇ ಎಂಬುದನ್ನು ಕೂಲಂ ಕಷವಾಗಿ ಅಧ್ಯ ಯನ ನಡೆಸಲಾಗು ವುದು. ಇದರ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಮುಖ್ಯಮಂತ್ರಿ ವಿವ ರಿಸಿದರು.
 ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಶಿಫಾರಸಿನಂತೆ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ನೀಡಬೇಕಾಗಿರುವ ಸಹಾಯಧನ ವನ್ನು ಶೀಘ್ರ ನೀಡಲಾಗುವುದು. ಸಂತ್ರಸ್ತರ ಪುನರ್ವಸತಿ ಯೋಜನೆಯನ್ನು ಆದಷ್ಟು ಶೀಘ್ರ ಅನು ಷ್ಠಾನಕ್ಕೆ ತರಲು ಸರಕಾರ ಕಟಿಬದ್ಧವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News