ಅಕ್ರಮ ಚಿನ್ನ, ಕೇಸರಿ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

Update: 2016-07-15 18:04 GMT

ಮಂಗಳೂರು, ಜು. 15: ಅಕ್ರಮ ಚಿನ್ನ ಮತ್ತು ಕೇಸರಿ ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳಿಬ್ಬರನ್ನು ಕಸ್ಟಮ್ ಇಲಾಖೆ ಅಧಿಕಾರಿಗಳು ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ಮುಹಮ್ಮದ್ ಹನೀಫ್ ಹಾಗೂ ಕೊಡಗಿನ ಉದ್ದಪ್ಪ ಎಂದು ಗುರುತಿಸಲಾಗಿದೆ. ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳಿಂದ 2 ಕೆ.ಜಿ. ಚಿನ್ನ ಹಾಗೂ 2 ಕೆ.ಜಿ. ಕೇಸರಿಯನ್ನು ವಶಪಡಿಸಿಕೊಂಡಿದ್ದಾರೆ.

ದುಬೈಯಿಂದ ಮುಂಬಯಿ ಮಾರ್ಗವಾಗಿ ಮಂಗಳೂರಿಗೆ ಆಗಮಿಸಿದ ಸ್ಪೈಸ್ ಜೆಟ್ ವಿಮಾನದಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದರು. ಅವರನ್ನು ತಪಾಸಣೆಗೊಳಪಡಿಸಿದಾಗ ಅಕ್ರಮ ಚಿನ್ನ ಮತ್ತು ಕೇಸರಿ ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News