‘ಇಬ್ರಾಹೀಂ ಎ. ಪಿಂಟೊ’ಹಜ್-ಉಮ್ರಾ ಸೇವೆ ಅನಾವರಣ

Update: 2016-07-15 18:35 GMT

ಉಡುಪಿ, ಜು.15: ‘ಇಬ್ರಾಹೀಂ ಎ. ಪಿಂಟೋ’ ಅಂತಾರಾಷ್ಟ್ರೀಯ ಹಜ್ ಮತ್ತು ಉಮ್ರಾ ಸರ್ವಿಸ್ ಅನಾವರಣ ಕಾರ್ಯಕ್ರಮವು ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ ಜರಗಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ‘ವಾರ್ತಾಭಾರತಿ’ ಪತ್ರಿಕೆಯ ಮುಖ್ಯ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮಾತನಾಡಿ, ಆಚರಣೆಯ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ಅದು ಗೊಡ್ಡು ಆಚರಣೆ ಯಾಗುತ್ತದೆ. ಹಜ್ ಯಾತ್ರೆಯ ಮೂಲಕ ಏಕತೆ, ಸಮಾನತೆ ಹಾಗೂ ಮಾನವೀಯತೆಯ ಪಾಠವನ್ನು ಕಲಿಯಬಹುದಾಗಿದೆ ಎಂದರು.
ಸೌದಿ ಅರೇಬಿಯಾದ ಎನ್ವರ್ಮೆಂಟಲ್ ಸರ್ವಿಸ್- ನ್ಯಾಶನಲ್ ಗಾರ್ಡ್ ಹೆಲ್ತ್ ಐರ್ಸ್‌ನ ನಿರ್ದೇಶಕ ಹಾದ್ ಅಲ್ ಓತೈಬಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಇಬ್ರಾಹೀಂ ಎ.ಪಿಂಟೊ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ವಕ್ ಸಲಹಾ ಮಂಡಳಿಯ ಅಧ್ಯಕ್ಷ ಯಹ್ಯಾ ನಕ್ವ, ಮಾಜಿ ಅಧ್ಯಕ್ಷ ಟಿ.ಎಸ್.ಬುಡಾನ್ ಬಾಷಾ, ಜಿಯಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ವೌಲಾನ ಉಬೈದುಲ್ಲಾ ಅಬೂಬಕರ್ ನದ್ವಿ, ಬಳ್ಳಾರಿಯ ಇಮಾಮ್ ಶೇಖ್ ಅಬ್ದುರ್ರಹೀಂ ಸಗ್ರಿ, ಬಿಜಾಪುರದ ಇಸ್ಲಾಮಿಕ್ ವಿದ್ವಾಂಸ ಶೇಖ್ ಬಶೀರ್ ಉಮ್ರಿ, ಬಿಜಾಪುರ ಜಾಮಿಯ ಮಸೀದಿಯ ಖತೀಬ್ ವೌಲಾನ ಸೈಯದ್ ಮುಹಮ್ಮದ್ ಯೂಸ್ು, ಕೇಂದ್ರೀಯ ಶಾಫಿ ಜುಮಾ ಮಸೀದಿಯ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿ, ಉದ್ಯಮಿ ಆತ್ೀ ಹುಸೈನ್ ಭಾಗವಹಿಸಿದ್ದರು.ಬ್ದುಲ್ ಖಾದರ್ ಉಳ್ಳಾಲ, ಕುವೈತ್ ಇಸ್ಲಾಮಿಕ್ ಬ್ಯಾಂಕ್‌ನ ಪ್ರಬಂಧಕ ರ್ಸ್ರಾಝ್ ಸುಲೈಮಾನ್, ಕಾರ್ಯಕ್ರಮ ಸಂಯೋಜಕ ಮುಹಮ್ಮದ್ ಅಝರ್ ಉಪಸ್ಥಿತರಿದ್ದರು.
ನಿತಾಝ್ ಅಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News