ಇಂದು ‘ಕೋಬೆ ಸಿಝ್ಲರ್ಸ್’ನಲ್ಲಿ ಖಾದ್ಯ ಸೇವನೆ ಸ್ಪರ್ಧೆ

Update: 2016-07-16 18:47 GMT

ಮಂಗಳೂರು, ಜು.16: ನಗರದ ಬಲ್ಮಠದ ಕೋಬೆ ಸಿಝ್ಲರ್ಸ್ ನಲ್ಲಿ ಜು.17ರಂದು ‘ತ್ರಿ ಹಂಗ್ರಿ ಮೆನ್’ ವತಿಯಿಂದ ‘ಮ್ಯಾನ್ ವರ್ಸಸ್ ಸಿಝ್ಲರ್’ ಖಾದ್ಯ ಸೇವನೆ ಸ್ಪರ್ಧೆಯು ನಡೆಯಲಿದೆ.

ಸ್ಪರ್ಧೆಯಲ್ಲಿ ಇಬ್ಬರ ತಂಡ ಭಾಗವಹಿಸಬಹುದಾಗಿದ್ದು, ಪ್ರತೀ ತಂಡಕ್ಕೆ 300 ರೂ. ಪ್ರವೇಶ ಶುಲ್ಕವಿರುತ್ತದೆ. ಭಾಗವಹಿಸುವ ಪ್ರತೀ ತಂಡಕ್ಕೆ 300 ರೂ.ನ ಕೋಬೆ ವೋಚರ್ ನೀಡಲಾಗುತ್ತದೆ. ಈ ಬಾರಿ 20 ತಂಡಗಳಿಗೆ ಅವಕಾಶ ನೀಡಲಾಗುವುದು. ಅಪರಾಹ್ನ 3 ಗಂಟೆಯಿಂದ ಸಂಜೆ 6ರವರೆಗೆ ಸ್ಪರ್ಧೆ ನಡೆಯಲಿದ್ದು, ಮೊದಲು ಬಂದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News