ಎಂ.ಎ. ಇಬ್ರಾಹೀಮ್ ಖಾಸಿಮಿ ಉಸ್ತಾದ್ ನಿಧನ

Update: 2016-07-18 12:21 GMT

ಮೂಡುಬಿದಿರೆ, ಜು.18: ಇಲ್ಲಿನ ಹೊಸಂಗಡಿ ಮೊಯ್ದೀನ್ ಜುಮಾ ಮಸೀದಿಯ ಖತೀಬ್, ಖಾಸಿಮಿ ಉಸ್ತಾದರೆಂದೇ ಪ್ರಸಿದ್ಧರಾಗಿದ್ದ ಅಲ್‌ಹಾಜ್ ಎಂ.ಎ. ಇಬ್ರಾಹೀಂ ಖಾಸಿಮಿ (60) ಸೋಮವಾರ ಮಧ್ಯಾಹ್ನ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹೊಸಂಗಡಿಯ ಮೊಯ್ದೀನ್ ಜುಮಾ ಮಸೀದಿಯಲ್ಲಿ ಕಳೆದ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರು ಅಪಾರ ಶಿಷ್ಯವೃಂದವನ್ನು ಹೊಂದಿದ್ದರು. ಸೋಮವಾರ ಕಾರ್ಕಳದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸು ಮೂಡುಬಿದಿರೆಗೆ ಬರುವಾಗ ಈ ಘಟನೆ ನಡೆದಿದ್ದು, ಮೂಡುಬಿದಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಮೂಲತಃ ವೇಣೂರು ನರ್ತಿಕಲ್‌ನವರಾಗಿದ್ದು, ಗಂಟಾಲ್ಕಟ್ಟೆ ನೆತ್ತೋಡಿ ಪರಿಸರದಲ್ಲಿ ವಾಸವಾಗಿದ್ದರು. ಮೃತರು ಪತ್ನಿ, 4 ಮಂದಿ ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಉಸ್ತಾದ್‌ರ ನಿಧನಕ್ಕೆ ಶಾಸಕ ಅಭಯಚಂದ್ರ ಜೈನ್, ಮಸೀದಿ ಕಮಿಟಿಯ ಅಧ್ಯಕ್ಷ ಶೇಖಬ್ಬ, ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್, ಪುರಸಭಾ ಮಾಜಿ ಸದಸ್ಯೆ ಮೇರಿ ಪಿರೇರಾ ಸಹಿತ ಹಲವು ಗಣ್ಯರು, ಧಾರ್ಮಿಕ ಮುಖಂಡರುಗಳು ಸಂತಾಪ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News