ವಸ್ತ್ರ ಸಂಹಿತೆ ಬಗ್ಗೆ ಎಲ್ಲೂ ವ್ಯಾಖ್ಯಾನ ಇಲ್ಲ: ಕುಮಾರ್

Update: 2016-07-19 09:28 GMT

ಮಂಗಳೂರು, ಜು.19: ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಕುರಿತಂತೆ ಸರಕಾರದಿಂದ ಸ್ಪಷ್ಟ ನಿರ್ದೇಶನವನ್ನು ಪಡೆದು ಪಾಲಿಸಲಾಗುವುದು. ಆದರೆ ತನಗೆ ತಿಳಿದಂತೆ ಸದ್ಯ ವಸ್ತ್ರ ಸಂಹಿತೆ ಕುರಿತಂತೆ ವ್ಯಾಖ್ಯಾನ ಎಲ್ಲೂ ತಿಳಿಸಲಾಗಿಲ್ಲ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಅಧ್ಯಕ್ಷರೂ ಆಗಿರುವ ಕುಮಾರ್ ಹೇಳಿದ್ದಾರೆ.

ಕದ್ರಿ ಮಂಜುನಾಥ ಕ್ಷೇತ್ರ ಹಾಗೂ ಮಂಗಳಾದೇವಿ ಕ್ಷೇತ್ರಗಳಲ್ಲಿ ಭಕ್ತಾದಿಗಳು ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಫಲಕಗಳನ್ನು ಹಾಕಲಾಗಿರುವ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂಗಳಾದೇವಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಕುರಿತು ಹಾಕಲಾಗಿರುವ ಫಲಕದ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ದೇವಸ್ಥಾನ ಆಡಳಿತ ಮಂಡಳಿಯಿಂದ ಸ್ಪಷ್ಟೀಕರಣ ಕೋರಲಾಗಿದೆ. ಕದ್ರಿ ದೇವಸ್ಥಾನದ ಬಗ್ಗೆ ಈಗಷ್ಟೆ ತಮಗೆ ತಿಳಿದಿದ್ದು, ಈ ಬಗ್ಗೆ ವಿಚಾರಿಸಲಾಗುವುದು. ಉಳಿದ ರಾಜ್ಯಗಳಲ್ಲಿ ದೇವಸ್ಥಾನಗಳಲ್ಲಿ ಯಾವ ನೆಲೆಯಲ್ಲಿ ವಸ್ತ್ರ ಸಂಹಿತೆಯನ್ನು ಪಾಲಿಸಲಾಗುತ್ತಿದೆ, ಅದರ ವ್ಯಾಖ್ಯಾನದ ಬಗ್ಗೆಯೂ ತಿಳಿದು ಸರಕಾರ ಮಟ್ಟದಿಂದ ನಿರ್ದೇಶನವನ್ನು ಪಾಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News