ಗಿಲ್‌ನೆಟ್ ಮೀನುಗಾರರ ಸಂಘದ ಮಹಾಸಭೆ

Update: 2016-07-19 14:48 GMT

ಮಂಗಳೂರು, ಜು. 19: ದ.ಕ. ಜಿಲ್ಲಾ ಗಿಲ್‌ನೆಟ್ ಮೀನುಗಾರರ ಸಂಘದ ಮಹಾಸಭೆಯು ಇತ್ತೀಚೆಗೆ ಸಂಘದ ಅಧ್ಯಕ್ಷ ಅಲಿ ಹಸನ್‌ರ ಅಧ್ಯಕ್ಷತೆಯಲ್ಲಿ ಟ್ರಾಲ್‌ಬೋಟ್ ಮೀನುಗಾರರ ಸಂಘದ ಕಟ್ಟಡದಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಬಿ.ಎ.ಬಶೀರ್ ಲೆಕ್ಕಪತ್ರ ಮಂಡಿಸಿದರು. ಸುಭಾಷ್ ಮುಳಿಹಿತ್ಲು ವರದಿ ವಾಚಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಪ್ರತಿ ವರ್ಷ ನಡೆಯುವ ಇಂಜಿನ್ ಪರಿಶೀಲನೆಯನ್ನು ಐದು ವರ್ಷಗಳಿಗೊಮ್ಮೆ ನಡೆಸುವಂತೆ ಹಾಗೂ ಪ್ರತಿ ತಿಂಗಳ ಸೀಮಿ ಎಣ್ಣೆ ತಲಾ 300 ಲೀಟರ್‌ನಂತೆ ವರ್ಷದ 12 ತಿಂಗಳಲ್ಲಿೂ ಸಬ್ಸಿಡಿ ದರದಲ್ಲಿ ನೀಡುವಂತೆ ಸರಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

2016-17ನೆ ಸಾಲಿಗೆ ಅಲಿ ಹಸನ್ ಅಧ್ಯಕ್ಷರನ್ನಾಗಿ, ಸತೀಶ್ ಕೋಟ್ಯಾನ್ ಗೌರವಾಧ್ಯಕ್ಷರಾಗಿ, ಬಿ.ಎ.ಬಶೀರ್ ಪ್ರಧಾನ ಕಾರ್ಯದರ್ಶಿಯಾಗಿ, ಸುಭಾಷ್ ಮುಳಿಹಿತ್ಲು ಕಾರ್ಯದರ್ಶಿಯಾಗಿ, ಪ್ರಾಣೇಶ್ ಮತ್ತು ಮುಹಮ್ಮದ್ ರಫೀಕ್ ಉಪಾಧ್ಯಕ್ಷರಾಗಿ ಹಾಗೂ ಸುನೀಲ್ ಜೆ.ಕೋಶಾಧಿಕಾರಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ 13 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News