ಮಟ್ಕಾ: ಇಬ್ಬರ ಸೆರೆ

Update: 2016-07-19 18:20 GMT

ಕುಂದಾಪುರ, ಜು.19: ವಡೇರಹೋಬಳಿ ಗ್ರಾಮದ ಭಂಡಾರ್‌ಕಾರ್ಸ್ ಕಾಲೇಜು ರಸ್ತೆಯಲ್ಲಿ ಸೋಮವಾರ ಸಂಜೆ ಮಟ್ಕಾ ಜುಗಾರಿಗೆ ಸಂಬಂಧಿಸಿ ಹೇರಿ ಕುದ್ರುವಿನ ಭಾಸ್ಕರ ಪೂಜಾರಿ(54) ಹಾಗೂ ಬೀಜಾಡಿ ಅರಸರಬೆಟ್ಟುವಿನ ಪ್ರಕಾಶ ಗಾಣಿಗ (37) ಎಂಬವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಭಾಸ್ಕರ ಪೂಜಾರಿಯಿಂದ 7,470 ರೂ. ನಗದು ಹಾಗೂ ಪ್ರಕಾಶ ಗಾಣಿಗನಿಂದ 26,000 ರೂ. ನಗದು, ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News