ಮಂಗಳೂರು: ಮನೆ ನಿರ್ಮಿಸಲು ಅರ್ಜಿ ಆಹ್ವಾನ

Update: 2016-07-20 18:32 GMT


ಮಂಗಳೂರು, ಜು.20: ಭಾರತ ಸರಕಾರದ ನಗರ ಬಡತನ ನಿರ್ಮೂಲನಾ ಮಂತ್ರಾ ಲಯ 'ಎಲ್ಲರಿಗೂ ಮನೆ' ಎಂಬ ಹೊಸ ವಸತಿ ಯೋಜನೆಯನ್ನು ಜಾರಿಗೊಳಿಸಿದ್ದು, ನಗರ ಪ್ರದೇಶದಲ್ಲಿ ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ವಸತಿ ಸೌಲಭ್ಯ ಪಡೆಯದೆ ಇರುವ ಫಲಾನುಭವಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು ವಸತಿ ರಹಿತರಾಗಿದ್ದು, ಗುಡಿಸಲು ವಾಸಿಗಳು, ತಾತ್ಕಾಲಿಕ ಶೆ್, ಶಿಥಿಲಗೊಂಡ ಮನೆ, ಕಚ್ಚಾ ಮನೆಗಳಲ್ಲಿ ವಾಸಿಸುತ್ತಿದ್ದು, 300 ಚ.ಮೀ.ಗಿಂತ ಹೆಚ್ಚಿಲ್ಲದಂತೆ ಒಂದು ಕೋಣೆಯಿಲ್ಲದ, 4ಕ್ಕಿಂತ ಹೆಚ್ಚು ಸದಸ್ಯರಿರುವವರು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 3 ಲಕ್ಷ ರೂ.ಗಿಂತ ಕಡಿಮೆ ಇರಬೇಕು. ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು, ಸಂಬಂಧಿಸಿದ ಖಾತೆ ಹೊಂದಿರಬೇಕು.

ಮನೆ ನಿರ್ಮಾಣದ ಆಸಕ್ತಿ ಹೊಂದಿರುವ ಸಾರ್ವಜನಿಕರು ದಾಖಲೆಗಳೊಂದಿಗೆ ಜುಲೈ 31ರೊಳಗೆ ಖುದ್ದಾಗಿ ಮಂಗಳೂರು ಮಹಾನಗರಪಾಲಿಕೆಯ ಲಾಲ್‌ಬಾಗ್ ಕಚೇರಿಯಲ್ಲಿರುವ ನಗರ ಬಡತನ ನಿರ್ಮೂಲನಾ ಕೋಶದಲ್ಲಿರುವ ಸಮುದಾಯ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮಹಾನಗರಪಾಲಿಕೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News