ಅಂಚೆ ಕಚೇರಿಗಳಿಗೆ ನೇಮಕಾತಿ

Update: 2016-07-20 18:33 GMT


ಮಂಗಳೂರು, ಜು.20: ತಾಲೂಕಿನ ಅಡ್ಯಾರ್, ಪೆದಮಲೆ ಹಾಗೂ ದೇರಳಕಟ್ಟೆ ಅಂಚೆ ಕಚೇರಿಯಲ್ಲಿ ಗ್ರಾಮೀಣ ಡಾಕ್ ಸೇವಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕನಿಷ್ಠ ಎಸೆಸೆಲ್ಸಿ ಉತ್ತೀರ್ಣರಾಗಿರುವವರು, ಕಂಪ್ಯೂಟರ್ ತರಬೇತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ನೇಮ ಕಾತಿಯು ತಾತ್ಕಾಲಿಕವಾಗಿದ್ದು, ಪ್ರತಿದಿನ 3-5 ಗಂಟೆಗಳ ಕಾಲ ದುಡಿಯಬೇಕಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕಡೆಯ ದಿನ.
ಹೆಚ್ಚಿನ ಮಾಹಿತಿಗಾಗಿ ಅಂಚೆ ನಿರೀಕ್ಷಕರ ಕಚೇರಿ, ಹಂಪನಕಟ್ಟೆ ಅಂಚೆ ಕಚೇರಿ, ಮಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಮಂಗಳೂರು ದಕ್ಷಿಣ ಉಪವಿಭಾಗ ಅಂಚೆ ನಿರೀಕ್ಷಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News