ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಿಲಾಗ್ರಿಸ್ ವಿದ್ಯಾರ್ಥಿಗಳಿಂದ ಧರಣಿ

Update: 2016-07-22 12:48 GMT

ಮಂಗಳೂರು,ಜು.21:ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳು ಇಂದು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು.

ಕಾಲೇಜಿನ ತರಗತಿಯ ಅವಧಿಗಿಂತ 5 ನಿಮಿಷದವರೆಗೆ ತಡವಾಗಿ ಬಂದರೂ ಅವಕಾಶ ನೀಡುವುದು, ಮಧ್ಯಾಹ್ನ ಊಟದ ಸಮಯವನ್ನು ಒಂದು ಗಂಟೆ ವಿಸ್ತರಿಸಬೇಕು ಮತ್ತು ಶುಕ್ರವಾರ ನಮಾಝ್‌ನ ಸಮಯಾವಕಾಶವನ್ನು ಈ ಹಿಂದಿನ ವರ್ಷದಲ್ಲಿದ್ದಂತೆ ಮಧ್ಯಾಹ್ನ 12:35ರಿಂದ 1:55 ರವರೆಗೆ ವ್ಯವಸ್ಥೆಗೊಳಿಸಬೇಕು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಾಲೇಜಿನ ಶುಲ್ಕ ಪಾವತಿಗೆ ಕಾಲಾವಕಾಶವನ್ನು ನೀಡಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಾಯಿತು.

ಪೂರ್ವಾಹ್ನ 11:30 ಕ್ಕೆ ತರಗತಿ ಬಹಿಷ್ಕರಿಸಿ ಕಾಲೇಜಿನ ಗೇಟ್ ಮುಂದೆ ವಿದ್ಯಾರ್ಥಿಗಳು ಪ್ರತಿಭಟಿಸಿ ಕಾಲೇಜಿನ ಧೋರಣೆಯನ್ನು ಖಂಡಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಬೇಡಿಕೆಯ ಬಗ್ಗೆ ಪ್ರಾಂಶುಪಾಲರ ಗಮನಕ್ಕೆ ತಂದಿದ್ದರೂ ಅದನ್ನು ಈಡೇರಿಸದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿಶ್ವವಿದ್ಯಾನಿಲಯದ ನಿಯಮಾವಳಿ ಪ್ರಕಾರ ಕಾಲೇಜಿನ ತರಗತಿಗಳನ್ನು ಮಾಡಬೇಕಾಗಿದೆ. ಅದರಂತೆ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಸಮಯವನ್ನು ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೋಸ್ಕರ ಈ ರೀತಿಯ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರದ ನಮಾಝ್‌ಗೆ ತೆರಳಲು ಅನುಕೂಲವಾಗಲು ವಿದ್ಯಾರ್ಥಿಗಳಿಗೆ 12:45 ರಿಂದ 1:55 ರವರೆಗೆ ಸಮಯಾವಕಾಶ ನೀಡಲಾಗಿದ್ದು ಇದು ವಿದ್ಯಾರ್ಥಿಗಳ ಹೆತ್ತವರ ಜೊತೆ ಮಾತುಕತೆ ನಡೆಸಿ ಮಾಡಿದ ಸಮಯವಾಗಿದೆ. ಇದಕ್ಕೆ ವಿದ್ಯಾರ್ಥಿಗಳ ಹೆತ್ತವರು ಒಪ್ಪಿಕೊಂಡಿದ್ದರು. ಬಡ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಪಾವತಿಸಲು ಕಾಲಾವಕಾಶವನ್ನು ನೀಡಲಾಗಿದೆ.

ವೆಲೆರಿಯನ್ ಡಿಸೋಜ, ಪ್ರಾಂಶುಪಾಲರು, ಮಿಲಾಗ್ರಿಸ್ ಕಾಲೇಜು  

ಮಕ್ಕಳು ಶಾಲೆಯಲ್ಲಿ ಉತ್ತಮವಾಗಿ ಕಲಿಯಬೇಕೆಂದು ಕಾಲೇಜಿನಲ್ಲಿ ತರಗತಿಗಳನ್ನು ಸಮಯಕ್ಕೆ ಸರಿಯಾಗಿ ಮಾಡುತ್ತಿದ್ದೇವೆ. ಇದಕ್ಕೋಸ್ಕರ ಶಿಕ್ಷಕರನ್ನು ನಿಲ್ಲಿಸಿ ತರಗತಿಯನ್ನು ನೀಡಲಾಗುತ್ತಿದೆ. ನಾವು ವಿಶ್ವವಿದ್ಯಾನಿಲಯ ನಿಯಮಾವಳಿ ಪ್ರಕಾರವೇ ಕಾಲೇಜು ನಡೆಸುತ್ತಿದ್ದೇವೆ.

ಐವನ್ ಡಿಸೋಜ, ಉಪಾಧ್ಯಕ್ಷರು, ಮಿಲಾಗ್ರಿಸ್ ಕಾಲೇಜು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News