ವಿಶ್ವಮಂಗಳ ಶಾಲೆಯಲ್ಲಿ ‘ಮೂಲಿಕಾವನ’ ಉದ್ಘಾಟನೆ

Update: 2016-07-22 18:53 GMT

ಕೊಣಾಜೆ, ಜು.22: ಶೇ.90ರಷ್ಟು ಗಿಡ, ಮರಗಳು ಔಷೀಯ ಗುಣ ಹೊಂದಿದ್ದರೂ ಅದರ ಬಳಕೆ ಬಗ್ಗೆ ಅರಿವಿನ ಕೊರತೆಯಿದೆ. ಆಟಿ ಅಮವಾಸ್ಯೆ ದಿನ ಸೇವಿಸುವ ಪಾಲೆಮರದ ಕಷಾಯ ಹಲವು ರೋಗಗಳಿಗೆ ರಾಮಬಾಣ, ಅದೇ ರೀತಿ ಮನೆಯಂಗಳದ ಸೌಂದರ್ಯ ನಿಟ್ಟಿನಲ್ಲಿ ನೆಡುವ ಕ್ರೊಟಾನ್ ಗಿಡಗಳು ವಿಷಕಾರಿ ಅಂಶ ಹೊಂದಿದ್ದು, ಮಕ್ಕಳ ಪಾಲಿಗೆ ಮಾರಕ. ಶಾಲೆಗಳಲ್ಲಿ ಗಿಡ ನೆಟ್ಟು ಪೋಷಿಸಿದರೆ ಅಲ್ಲಿ ಕಲಿಯುವ ಮಕ್ಕಳಲ್ಲಿ ಗಿಡ, ಮರಗಳ ಬಗ್ಗೆ ಅಭಿರುಚಿ ಮೂಡಲು ಸಾಧ್ಯ ಎಂದು ಪಾರಂಪರಿಕ ವೈದ್ಯ ಶಂಕರಾನಂದ ಎನ್.ಇನವಳ್ಳಿ ಹೇಳಿದರು.ಕೊಣಾಜೆ ವಿಶ್ವಮಂಗಳ ವಿದ್ಯಾಸಂಸ್ಥೆ ವತಿಯಿಂದ ನಡೆದ ‘ಮೂಲಿಕಾವನ’ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಪ್ರೊ.ಇಸ್ಮಾಯೀಲ್ ಬಿ. ಅಧ್ಯಕ್ಷತೆ ವಹಿಸಿದ್ದರು.

ವಿಶ್ವ ಪರಿಸರ ದಿನದಂದು ನಡೆದ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಶಾಲೆಯ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು. ಸಂಸ್ಥೆಯ ಕಾರ್ಯದರ್ಶಿ ಪ್ರೊ.ಭೋಜ ಪೂಜಾರಿ, ಕೋಶಾಕಾರಿ ತಿಮ್ಮಪ್ಪನಾಯ್ಕ, ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಅಂತು ಡಿಸೋಜ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೋಭಾವತಿ ಬಿ., ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಶರೀನಾ ಉಪಸ್ಥಿತರಿದ್ದರು. ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಎಂ. ಸ್ವಾಗತಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಪೂರ್ಣಿಮಾ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ದಿಲೀಪ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News