ಕಾಸರಗೋಡು: ಸ್ನಾನಕ್ಕೆಂದು ಹೊಂಡಕ್ಕಿಳಿದ ಯುವಕ ನೀರುಪಾಲು
Update: 2016-07-24 08:15 GMT
ಕಾಸರಗೋಡು, ಜು.24: ಸ್ನೇಹಿತರ ಜೊತೆ ಸ್ನಾನಕ್ಕೆಂದು ನದಿಗಿಳಿದ ಯುವಕನೋರ್ವ ನೀರಿನಲ್ಲಿ ಮುಳುಗಿದ ಘಟನೆ ನೀರ್ಚಾಲು ಮಾನ್ಯದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಎರಿಯಾಲ್ನ ಶಿಯಾಝ್ (21) ನಾಪತ್ತೆಯಾದ ಯುವಕ.
ಮಾನ್ಯದ ಮುಂಡೋಲ್ ಬಳಿ ನೀರು ತುಂಬಿದ್ದ ಹೊಂಡಕ್ಕೆ ಇಳಿದ ಸಂದರ್ಭದಲ್ಲಿ ಘಟನೆ ನಡೆದಿದೆ.
ಸ್ನೇಹಿತರ ಜೊತೆ ಪುಟ್ಬಾಲ್ ಆಡಿದ ಬಳಿಕ ಸ್ನಾನಕ್ಕೆಂದು ನೀರು ತುಂಬಿದ್ದ ಬೃಹತ್ ಹೊಂಡಕ್ಕೆ ಇಳಿದಿದ್ದರು. ಈ ವೇಳೆ ಶಿಯಾಝ್ ನೀರಿನಲ್ಲಿ ಮುಳುಗಿದ್ದು, ಜೊತೆಯಲ್ಲಿದ್ದವರು ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಕಾಸರಗೋಡಿನಿಂದ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯರು ಶೋಧ ನಡೆಸುತ್ತಿದ್ದಾರೆ.