ಯುನಿವೆಫ್‌ನಿಂದ ಶೇಖ್ ಅಹ್ಮದ್ ಸರ್ ಹಿಂದಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

Update: 2016-07-25 10:50 GMT

ಮಂಗಳೂರು, ಜು.25: ಯುನಿವೆಫ್ ವತಿಯಿಂದ ನಾಡು, ನುಡಿ, ಭಾಷೆ ಹಾಗೂ ಸಮುದಾಯ ಹಾಗೂ ಸಮಾಜದ ಒಳಿತು ಹಾಗೂ ಪ್ರಗತಿಗಾಗಿ, ಯಾವುದೇ ರೀತಿಯ ಪ್ರಶಸ್ತಿ ಹಾಗೂ ಪ್ರತಿಫಲಾಪೇಕ್ಷೆಯಿಲ್ಲದೆ ಶ್ರಮಿಸುತ್ತಿರುವ ವ್ಯಕ್ತಿಯೊಬ್ಬರಿಗೆ ಶೇಖ್‌ಅಹ್ಮದ್ ಸರ್‌ಹಿಂದಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, 2016-17ನೆ ಸಾಲಿನ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಂಗಳೂರಿನ ಕೆರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರ್‌ನ ಅಧ್ಯಕ್ಷ ಉಮರ್ ಯು.ಎಚ್.(ಮೊ.ಸಂ.: 98450 54191) ಮತ್ತು ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಬಿ.ಎ.ಮುಹಮ್ಮದ್ ಅಲಿ (ಮೊ.ಸಂ.: 9880723929) ಆಯ್ಕೆ ಸಮಿತಿ ಸದಸ್ಯರಾಗಿದ್ದಾರೆ. ಆ.15ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಪ್ರಶಸ್ತಿಗೆ ಅರ್ಹರಾಗುವ ವ್ಯಕ್ತಿ ಯಾವುದೇ ಸಂಘಟನೆಯ ಸದಸ್ಯರಾಗಿರಬಾರದು. ಅರ್ಹ ಅಭ್ಯರ್ಥಿಗಳ ಕುರಿತಂತೆ ವಿವರಗಳನ್ನು ಆ.5ರ ಒಳಗಾಗಿ ಉಮರ್ ಯು.ಎಚ್., ಅಧ್ಯಕ್ಷರು, ಕೆರಿಯರ್ ಗೈಡೆನ್ಸ್ ಆ್ಯಂಡ್ ಇನ್ಫಾರ್ಮೇಶನ್ ಸೆಂಟರ್, ಅಲ್ ರಹಬಾ ಕಾಂಪ್ಲೆಕ್ಸ್, ನೆಲ್ಲಿಕಾಯಿ ರಸ್ತೆ, ಮಂಗಳೂರು- 575 001 ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಯುನೆವೆಫ್ ಅಧ್ಯಕ್ಷ ರಫಿೀಉದ್ದೀನ್ ಕುದ್ರೋಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News