ದಾರುಲ್ ಇಲ್ಮ್ ಮದ್ರಸದಲ್ಲಿ ಆಲಿಮ್ ಕೋರ್ಸ್ ಆರಂಭ

Update: 2016-07-26 11:57 GMT

ಮಂಗಳೂರು, ಜು.26: ದಾರುಲ್ ಇಲ್ಮ್ ಮದ್ರಸಕ್ಕೆ 10 ವರ್ಷಗಳು ತುಂಬಿದ ಈ ಸಂದರ್ಭದಲ್ಲಿ, ಹೈಸ್ಕೂಲ್ ಮತ್ತು ಕಾಲೇಜ್ ವಿದ್ಯಾರ್ಥಿಗಳಿಗಾಗಿ ಮಂಗಳೂರಿನ ಫಳ್ನೀರಿನಲ್ಲಿರುವ ದಾರುಲ್ ಇಲ್ಮ್ ಮದ್ರಸದಲ್ಲಿ ಒಂದು ವರ್ಷದ ಆಲಿಮ್ /ಆಲಿಮಾ ಕೋರ್ಸ್‌ನ್ನು ಪ್ರಾರಂಭಿಸಲಾಗಿದೆ.

ಒಂದು ವರ್ಷದಲ್ಲಿ ಸಮಗ್ರ ಇಸ್ಲಾಮೀ ವಿಷಯಗಳ ಅಧ್ಯಯನ, ಅರೇಬಿಕ್ ಮತ್ತು ಉರ್ದು ಭಾಷೆ, ಮಿಫ್ತಾಹುಲ್ ಕುರ್‌ಆನ್, ತಜ್ವೀದ್, ಹದೀಸ್, ಫಿಖ್‌ಹ್, ಹಿ್‌ಝ, ತಫ್ಸೀರ್, ದೀನಿಯಾತ್, ಇಸ್ಲಾಮೀ ಚರಿತ್ರೆ, ಇಸ್ಲಾಮೀ ಜೀವನ ಕ್ರಮ ಮುಂತಾದ ವಿಷಯಗಳ ಸಹಿತ ಸಮಗ್ರ ಮತ್ತು ಸಂಪೂರ್ಣ ಕರ್ಮಶಾಸ್ತ್ರ ಮತ್ತು ಧರ್ಮಶಾಸ್ತ್ರವನ್ನು ವ್ಯವಸ್ಥಿತ ರೀತಿಯಲ್ಲಿ ನುರಿತ ಅಧ್ಯಾಪಕರಿಂದ ಕಲಿಸಲಾಗುವುದು. ಆಂಗ್ಲ ಮಾಧ್ಯಮದಲ್ಲಿ ತರಗತಿಯನ್ನು ನಡೆಸಲಾಗುವುದು. 

ಕೋರ್ಸ್‌ನ ಕೊನೆಯಲ್ಲಿ ಪ್ರಮಾಣ ಪತ್ರವನ್ನೂ ನೀಡಲಾಗುವುದು. ತರಗತಿಯ ಸಮಯ ಬೆಳಗ್ಗೆ 5:45ರಿಂದ 6:45 ಮತ್ತು ಸಂಜೆ 5ರಿಂದ 6:30. ದಾಖಲಾತಿಗೆ ಆಗಸ್ಟ್ 5 ಕೊನೆಯ ದಿನವಾಗಿದ್ದು, ಹೆಚ್ಚಿನ ವಿವರಗಳಿಗಾಗಿ ರಫಿೀಉದ್ದೀನ್ ಕುದ್ರೋಳಿ, ಪ್ರಾಂಶುಪಾಲರು, ದಾರುಲ್ ಇಲ್ಮ್, ಲುಲು ಸೆಂಟರ್, ಳ್ನೀರ್, ಮಂಗಳೂರು, ಮೊ.ಸಂ.:98452 09449ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News