ವಿದ್ಯುತ್ ಶಾಕ್ ಗೆ ವ್ಯಕ್ತಿ ಬಲಿ

Update: 2016-07-27 06:04 GMT

ಕಡಬ, ಜು.27: ವಿದ್ಯುತ್ ಶಾಕ್ ತಗುಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮೀನಾಡಿ ಕೊಡೆಂಕಿರಿ ನಿವಾಸಿ ಮ್ಯಾಥ್ಯೂ(64) ಎಂಬವರು  ಮೀನಾಡಿ ಸಮೀಪದ ಬೀರ್ಯ ಎಂಬಲ್ಲಿರುವ ತನ್ನದೇ ಜಮೀನಿನಲ್ಲಿ ಒಬ್ಬಂಟಿಯಾಗಿದ್ದ ವೇಳೆ ಈ ಘಟನೆ ನಡೆದಿದೆ. ವಿದ್ಯುತ್ ಹೋಲ್ಡರನ್ನು ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿದ್ದು, ರಾತ್ರಿ ಸಮಯದಲ್ಲಿ ಬಲ್ಬ್ ಸಿಕ್ಕಿಸುವ ವೇಳೆ ತಂತಿ ತಗುಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News