ಭಟ್ಕಳ:ಕುಡಿಯುವ ನೀರಿನ ಘಟಕದ ಮೇಲೆ ಉರುಳಿದ ಮರ - ನೀರು ಸರಾಬರಾಜು ಸ್ಥಗಿತ

Update: 2016-07-27 15:12 GMT

ಭಟ್ಕಳ,ಜು.27: ತಾಲೂಕಿನ ಮುರುಡೇಶ್ವರದ ಜನತಾವಿದ್ಯಾಲಯ ಪ್ರೌಢಶಾಲಾ ಕಂಪೌಂಡಿನ ಬೃಹದಾಕಾರದ ಮರವೊಂದು ಶುದ್ಧ ಕುಡಿಯುವ ನೀರಿನ ಘಟಕದ ಮೇಲೆ ಉರುಳಿಬಿದ್ದ ಪರಿಣಾಮ ಜನರಿಗೆ ಕುಡಿಯುವ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ಆ ಭಾಗದ ಸಾರ್ವಜನಿಕರು ದೂರಿದ್ದಾರೆ.

ಮರ ಉರುಳಿ ಬಿದ್ದು ಅದರ ಎಲೆಗಳೂ ಒಣಗಿ ಹೋಗಿದ್ದರೂ ಅದನ್ನು ಅಲ್ಲಿಂದ ತೆಗೆಯುವ ವ್ಯವಸ್ಥೆ ಮಾಡುತ್ತಿಲ ಎಂದು ನಾಗರೀಕರು ಆರೋಪಿಸುತ್ತಿದ್ದಾರೆ.

ಭಟ್ಕಳದ ಪಿ.ಎಲ್.ಡಿ. ಬ್ಯಾಂಕ್ ನ ನೆರವಿನಿಂದ ಆ ಭಾಗದ ಜನರಿಗೆ ಶುದ್ಧ ನೀರು ಪೂರೈಸುವ ಉದ್ದೇಶದಿಂದ ಅಲ್ಲಿ ಶುದ್ದ ನೀರಿನ ಘಟಕವೊಂದು ನಿರ್ಮಾಣ ಮಾಡಲಾಗಿತ್ತು. ಈ ಘಟಕದಿಂದ ನೂರಾರು ಮಂದಿ ಶುದ್ಧ ಕುಡಿಯುವ ನೀರು ಪಡೆಯುತ್ತಿದ್ದರು. ಆದರೆ ಮರ ಉರುಳಿಬಿದ್ದ ಪರಿಣಾಮ ಅಲ್ಲಿಗೆ ಹೋಗಿ ನೀರು ತರಲು ಜನರಿಗೆ ತೊಂದರೆಯಾಗುತ್ತಿದ್ದು ಇದನ್ನು ಕೂಡಲೆ ತೆರವುಗೊಳಿಸಬೇಕೆಂದು ನಾಗರೀಕ ಸೇವಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಕಾಮಾತ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News