ಕಿನ್ನಿಗೋಳಿ ಪಂಚಾಯತ್ ನಲ್ಲಿ ಪಂಚಾಯತ್ 100 ಬಾಪೂಜಿ ಸೇವಾ ಕೇಂದ್ರ ಉದ್ಘಾಟನೆ

Update: 2016-07-27 16:25 GMT

ಕಿನ್ನಿಗೋಳಿ, ಜು. 27: ಗ್ರಾಮೀಣ ಮಟ್ಟದ ಜನರಿಗೆ ಅನುಕೂಲವಾಗುವಂತೆ ಪ್ರತೀ ಗ್ರಾಮ ಪಂಚಾಯತ್ ನಲ್ಲಿ, ಪಂಚಾಯತ್ 100 ಬಾಪೂಜಿ ಸೇವಾ ಕೆಂದ್ರವನ್ನು ಪ್ರಾರಂಬಿಸಲಾಗಿದೆ ಎಂದು ಮಾಜಿ ಸಚಿವ ಅಯಚಂದ್ರ ಜೈನ್ ಹೇಳಿದರು.

   ಅವರು ಕಿನ್ನಿಗೋಳಿ ಪಂಚಾಯತ್ ನಲ್ಲಿ ಪಂಚಾಯತ್ 100 ಬಾಪೂಜಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು, ಈ ಹಿಂದೆ ಆರ್.ಟಿ.ಸಿ ಮತ್ತು ಕಂದಾಯಕ್ಕೆ ಸಂಬಂದ ಪಟ್ಟ ಕಡತಗಳಿಗೆ ಹೋಬಳಿ ಕೇಂದ್ರಕ್ಕೆ ಹೋಗಬೇಕಾಗಿದ್ದು ಇನ್ನು ಮುಂದೆ ಹೆಚ್ಚಿನ ಸವಲತ್ತುಗಳನ್ನು ಪಂಚಾಯತ್ ನಲ್ಲೆ ಸಿಗುವಂತೆ ಮಾಡಲಾಗಿದೆ. ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ 95 ಶೇಕಡ ಕಾಮಾಗಾರಿ ಮುಗಿದಿದ್ದು, ಯಾವುದೇ ಹೆಚ್ಚುವರಿ ಅನುದಾನವಿಲ್ಲದೆ ಹಿಂದಿನ ಅನುದಾನದಲ್ಲಿಯೇ ಶೀಘ್ರದಲ್ಲಿ ಕೆಲಸ ಮುಗಿಯಲಿದೆ ಎಂದರು, ಈ ಸಂದರ್ಭ ಮಾಜಿ ಸಚಿವ ಅಭಯಚಂದ್ರ ಜೈನ್ ಪಂಚಾಯತ್ ಅವರಣದಲ್ಲಿ ಕೋಟಿ ವೃಕ್ಷ ಅಬಿಯಾನದಡಿ ಗಿಡ ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯ ವಿನೋದ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿಲೋಮಿನ ಸಿಕ್ವೇರ, ಉಪಾಧ್ಯಕ್ಷೆ ಸುಜಾತ, ಎ.ಪಿ.ಎಂ.ಸಿ ಮಾಜಿ ಸದಸ್ಯರಾದ ಪ್ರಮೋದ್ ಕುಮಾರ್, ಪಂಚಾಯತ್ ಅಭಿವೃದ್ದಿ ಅಧಿಕಾರಿ ಅರುಣ್ ಪ್ರದೀಪ್ ಡಿ ಸೋಜ, ಕಿನ್ನಿಗೋಳಿ ಪಂಚಾಯತ್ ಸದಸ್ಯರಾದ ಟಿ.ಎಚ್.ಮಯ್ಯದಿ , ದೇವ ಪ್ರಸಾದ್ ಪುನರೂರು, ರವೀಂದ್ರ, ಪ್ರಕಾಶ್ ಹೆಗ್ಡೆ, ಶ್ಯಾಮಲ, ಚಂದ್ರ ಶೇಖರ್, ಶರತ್, ಜೋನ್ಸನ್ ಜೆರೋಮ್ ಡಿ ಸೋಜ, ಸುಲೋಚನ, ಹೇಮಲತಾ, ಪೂರ್ಣಿಮ, ಸುನಿತಾ ರೋಡ್ರಿಗಸ್, ವಾಣಿ, ಸೇವಂತಿ, ಶಾಲಿನಿ, ಸಂತಾನ್ ಡಿಸೋಜ, ಪ್ರಕಾಶ್ ಆಚಾರ್ಯ ಮತ್ತಿತರರು ಇದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News