ಮುಲ್ಕಿ ಪ್ರೆಸ್ ಕ್ಲಬ್ ಸಂಯೋಜನೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ

Update: 2016-07-27 16:32 GMT

ಮುಲ್ಕಿ, ಜು.27: ಸಾರ್ವಜನಿಕ ಸಂಕಷ್ಟಗಳ ಪರಿಹಾರಕ್ಕೆ ಕೈಗನ್ನಡಿಯಾಗಿ ಸಹಕರಿಸುವ ಪತ್ರಿಕೆಗಳು ಅರ್ಹರನ್ನು ಗುರುತಿಸುವ ಮೂಲಕ ಅವರ ಸಾಧನೆಗೆ ಗೌರವ ಲಭಿಸುವಂತೆ ಮಾಡುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮುಲ್ಕಿ ಪ್ರೆಸ್ ಕ್ಲಬ್ ಸಂಯೋಜನೆಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಪ್ರಯುಕ್ತ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜ ಸಂಕಷ್ಟಗಳ ಪರಿಹಾರಕ್ಕೆ ಸ್ವಾರ್ಥರಹಿತವಾಗಿ ಶ್ರಮಿಸುವ ಪತ್ರಕರ್ತರ ಶ್ರಮದ ಬಗ್ಗೆ ಸಮಾಜ ತಿಳುವಳಿಕೆ ಹೊಂದುವುದು ಅಗತ್ಯ ಪ್ರದೇಶದ ಸಂಸ್ಕೃತಿ, ಸಂಸ್ಕಾರ,ಭಾಷೆ ಹಾಗೂ ವಿವಿಧ ಕ್ಷೇತ್ರಗಳನ್ನು ಪತ್ರಿಕೆಗಳು ಪರಿಚಯಿಸುತ್ತಿರುವುದರಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.

ಕಾಪು ಪ್ರಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಆಚಾರ್ಯ ಮಾತನಾಡಿ,ಮಂಗಳೂರು ಸಮಾಚಾರ ಪತ್ರಿಕೆಯಿಂದ ಪ್ರಾರಂಭವಾದ ಕನ್ನಡ ಪತ್ರಿಕೆಗಳ ಇತಿಹಾಸವು ಇಂದು ಶಿಕ್ಷಣ ಕ್ಷೇತ್ರದ ವರೆಗೆ ದಾಪುಕಾಲಿಟ್ಟಿದೆ ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸಮಾಜದ ಸಾಧಕ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದರು.

ಈ ಸಂದರ್ಭ ನಿವೃತ್ತ ಶಿಕ್ಷಕ,ಲೇಖಕ,ಪತ್ರಕರ್ತಹಾಗೂ ಸಸಿಹಿತ್ಲು ಭಗವತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ ರವರನ್ನು ಪತ್ರಿಕಾ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತು.

 ಸನ್ಮಾನಕ್ಕೆ ಉತ್ತರಿಸಿದ ವಾಮನ ಇಡ್ಯಾ ರವರು, ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವ್ರತ್ತಿಯ ಬಳಿಕ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಪತ್ರಿಕೋದ್ಯಮ ಎಂದರೆ ಶ್ರಜನಶೀಲ ಯುವ ಜನರಿಗೆ ವಿಫುಲ ಆವಕಾಶ ಇರುವ ವೇದಿಕೆಯಾಗಿದ್ದು ಯುವ ಸಮುದಾಯ ಈ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.

ಅತಿಥಿಗಳಾಗಿ ಮೂಲ್ಕಿ ತುಳು ಸಮ್ಮೇಳನ ಸಮಿತಿ ಪ್ರಧಾನ ಸಂಚಾಲಕ ಎಸ್.ಆರ್ ಬಂಡಿಮಾರ್, ಮುಲ್ಕಿ ಪ್ರೆಸ್ ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು, ಕಾರ್ಯದರ್ಶಿ ಭಾಗ್ಯವಾನ್ ಸನಿಲ್,ಕೋಶಾಧಿಕಾರಿ ರಘುನಾಥ ಕೆಂಚನಕೆರೆ ಅತಿಥಿಗಳಾಗಿದ್ದರು. ನರೇಂದ್ರ ಕೆರೆಕಾಡು ಸ್ವಾಗತಿಸಿದರು. ಹರೀಶ್ ಕುಮಾರ್ ಹೆಜ್ಮಾಡಿ ನಿರೂಪಿಸಿದರು.ಭಾಗ್ಯವಾನ್ ಸನಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News