ಬೈಕ್ ಕಳವು

Update: 2016-08-03 18:21 GMT

ಕಾರ್ಕಳ, ಆ.3: ಕಸಬ ಗ್ರಾಮದ ಕೋಟೆ ಕೊಪ್ಪಳ ಎಂಬಲ್ಲಿ ಬೈಕೊಂದು ಕಳವಾದ ಬಗ್ಗೆ ದೂರು ದಾಖಲಾಗಿದೆ.
 ಉಡುಪಿ ಕೋಡಿಬೆಂಗ್ರೆಯ ಶಿವಾನಂದ ಅಮೀನ್ ಎಂಬವರು ಕೋಟೆಕೊಪ್ಪಲಿನ ರಾಧಾಕೃಷ್ಣ ಸಭಾಭವನದ ಬಳಿ ಜು.27ರಂದು ರಾತ್ರಿ ನಿಲ್ಲಿಸಿದ್ದ ಕೆಎ20 ಇಎ2008 ನಂಬರಿನ ಫ್ಯಾಷನ್ ಪ್ರೋ ಬೈಕ್ ಕಳವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News