ಕನಕಮಜಲು ಜಿಸಿಸಿ ಸೌಹಾರ್ದ ಕಮಿಟಿ ಅಸ್ತಿತ್ವಕ್ಕೆ

Update: 2016-08-07 07:50 GMT

ಅಬುದಾಬಿ, ಆ.7: ಗಲ್ಪ್ದೇಶಗಳಲ್ಲಿ ಇರುವ ಕನಕಮಜಲು ಗ್ರಾಮದ ಎಲ್ಲ ಪ್ರವಾಸಿಗಳನ್ನೊಳಗೊಂಡ ಜಿಸಿಸಿ ಸೌಹಾರ್ದ ಕಮಿಟಿಯನ್ನು ಶನಿವಾರ ರಚಿಸಲಾಯಿತು.

ಯುಎಇ, ಸೌದಿ ಅರಬಿಯ, ಬಹರೈನ್, ಕತರ್, ಕುವೈತ್ ದೇಶದಲ್ಲಿರುವ ಪ್ರವಾಸಿ ಸದಸ್ಯರೆಲ್ಲರು ಆನ್‌ಲೈನ್ ಮೂಲಕ ಚರ್ಚಿಸಿ, ನೂತನ ಸಮಿತಿಗೆ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಅಝೀಝ್ ಕನಕಮಜಲು, ಉಪಾಧ್ಯಕ್ಷರಾಗಿ ಮಹಮೂದ್ ಸಿ. ಎಚ್., ಇಕ್ಬಾಲ್ ಎಸ್.ಎ., ಕಾರ್ಯದರ್ಶಿಯಾಗಿ ಬಾತಿಷ್ ಕೆ.ಬಿ., ಜೊತೆ ಕಾರ್ಯದರ್ಶಿಗಳಾಗಿ ಶರೀಫ್ ಸಿ ಎಂ., ಅಶ್ರಫ್ ಪಿ.ಎ., ಸಲಹೆಗಾರರಾಗಿ ಬಾಪು ಪಿ.ಎ., ರಪೀಕ್ ಎ.ಕೆ., ಶರೀಫ್ ಗೌಸಿಯ, ಅಬೂಬಕರ್ ಕನಕಮಜಲು, ಖಾದರ್ ಕೊಪ್ಪಳ ,ಅಬ್ದುಲ್ ರಹಿಮಾನ್ ಟಿ.ಎಂ., ಸುಲೈಮಾನ್ ಸಿ.ಎಂ., ಮುಹಮ್ಮದಲಿ, ಇಬ್ರಾಹೀಂ ಪಿ.ಎ.ರವರನ್ನು ಆಯ್ಕೆ ಮಾಡಲಾಯಿತು..
 ಶರೀಫ್ ಗೌಸಿಯ ದುಆ ನೆರವೇರಿಸಿದರು. ಇಕ್ಬಾಲ್ ಎಸ್.ಎ. ಸಭೆಯನ್ನು ಉದ್ಘಾಟಿಸಿದರು. ಫಾರೂಕ್ ಟಿ.ಎ. ಸ್ವಾಗತಿಸಿದರು. ಇಕ್ಬಾಲ್ ಟಿ.ಎಂ. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News