ಮಂಗಳೂರಿನಿಂದ ಶಾರ್ಜಾಕ್ಕೆ ನೇರ ವಿಮಾನ ಯಾನ ಆರಂಭ

Update: 2016-08-07 11:44 GMT

     ಮಂಗಳೂರು, ಆ.7:ದುಬಾಯಿ ಮತ್ತು ಅಬುದಾಬಿಯ ನಂತರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಾರ್ಜಾಕ್ಕೆ ಜೆಟ್ ಏರ್‌ವೇಸ್ ನಿಂದ ಇಂದು ನೇರ ವಿಮಾನ ಯಾನ ಆರಂಭವಾಯಿತು.

    ಮಂಗಳೂರಿನಿಂದ ಶಾರ್ಜಾಕ್ಕೆ ಆರಂಭಿಸಲಾದ ನೇರ ವಿಮಾನಕ್ಕೆ ನಿಟ್ಟೆ ವಿ.ವಿ. ಕುಲಪತಿ ಎನ್.ವಿನಯ ಹೆಗ್ಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾರ್ಜಾಕ್ಕೆ ಆರಂಭವಾಗಿರುವ ನೇರ ವಿಮಾನಯಾನದಿಂದ ಉತ್ತಮ ಸೇವೆ ಲಭಿಸಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಂಸದ ನಳಿನ್ ಕುಮಾರ್ ಕಟೀಲು ,ಆಹಾರ ಮತ್ತು ನಾಗರಿಕ ಸಚಿವ ಯು.ಟಿ.ಖಾದರ್ ,ಏರಿಯಾ ಮೆನೇಜರ್ ಗಂಗಾಧರ ಹೆಗ್ಡೆ ಉಪಸ್ಥಿತರಿದ್ದರು.ಜೆಟ್ ಏರ್‌ವೇಸ್ ಜನರಲ್ ಮೆನೇಜರ್ ಯು.ಹರೀಶ್ ಶೆಣೈ ಸ್ವಾಗತಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

ಮೊದಲ ಹಾರಾಟದಲ್ಲಿ 156 ಎಕಾನಮಿ ಹಾಗೂ ಇಬ್ಬರು ಬಿಸಿನೆಸ್ ಕ್ಲಾಸ್ ಸೇರಿದಂತೆ 158 ಮಂದಿ ಪ್ರಯಾಣಿಕರು ಶಾರ್ಜಾಕ್ಕೆ ನೇರವಾಗಿ ಪ್ರಯಾಣಿಸಿದರು.

 ಮಂಗಳೂರಿನಿಂದ ಶಾರ್ಜಾಕ್ಕೆ ಜೆಟ್ ಏರ್‌ವೇಸ್ ವಿಮಾನ ಪ್ರತಿದಿನ ನೇರ ಹಾರಾಟವಿದೆ. ಬೆಳಗ್ಗೆ 9.30 ಕ್ಕೆ ಮಂಗಳೂರಿನಿಂದ ಹೊರಟು 11.45 ಕ್ಕೆ ಶಾರ್ಜಾ ತಲುಪಲಿದೆ. 12.45 ಕ್ಕೆ ಶಾರ್ಜಾದಿಂದ ಹೊರಟು ಸಾಯಂಕಾಲ 5.55 ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ.

ಜೆಟ್ ಏರ್‌ವೇಸ್‌ನಿಂದ 2013 ರಲ್ಲಿ ದುಬಾಯಿ, 2015 ರಲ್ಲಿ ಅಬುದಾಬಿಗೆ ನೇರ ವಿಮಾನ ಹಾರಾಟ ಆರಂಭಗೊಂಡಿತ್ತು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News