ಶೀನಪ್ಪ ಭಂಡಾರಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ

Update: 2016-08-07 18:25 GMT

ಪುತ್ತೂರು, ಆ.7: ಕಲೆಯ ಬೆಳವಣಿಗೆಯಲ್ಲಿ ಕಲಾವಿದರ ಕೊಡುಗೆ ಮಹತ್ತರವಾಗಿದ್ದು, ಈ ಕೊಡುಗೆಯನ್ನು ಜ್ಞಾಪಿಸಿ ಕಲಾವಿದರನ್ನು ಗೌರವಿಸುವುದು ಸುಸಂಸ್ಕೃತ ಸಮಾಜದ ಕರ್ತವ್ಯವಾಗಿದೆ. ಇಂತಹ ಗೌರವಗಳಿಂದ ಕಲೆ ಮತ್ತು ಕಲಾವಿದರು ಬೆಳೆಯುತ್ತಾರೆ ಎಂದು ಕೇರಳ ರಾಜ್ಯ ಪಾರ್ತಿಸುಬ್ಬ ಯಕ್ಷಗಾನ ಅಕಾಡಮಿ ಅಧ್ಯಕ್ಷ ಜಯರಾಮ ಮಂಜತ್ತಾಯ ಎಡನೀರು ಹೇಳಿದರು. ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಹಾಸ್ಯಗಾರ ಬಂಟ್ವಾಳ ಜಯರಾಮ ಆಚಾರ್ಯರಿಗೆ ಕೀರ್ತಿಶೇಷ ಶೀನಪ್ಪಭಂಡಾರಿ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಬಂಟ್ವಾಳ ಜಯರಾಮ ಆಚಾರ್ಯ ಹಾಗೂ ಅವರ ಪತ್ನಿ ಶ್ಯಾಮಲಾ ಆಚಾರ್ಯರನ್ನು ಉಷಾ ಎಸ್. ಭಂಡಾರಿ ಗೌರವಿಸಿದರು. ಈ ಸಂದಭ ಪ್ರಸಾದನ ಕಲಾವಿದ, ವೇಷಧಾರಿ ಶಕ್ತಿನಗರದ ಕೇಶವರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಕೊಳ್ಯೂರು ನಾರಾಯಣ ಭಟ್, ಮಣಿಲ ಮಹಾದೇವ ಶಾಸಿ, ರಮಾನಂದ ನೆಲ್ಲಿತ್ತಾಯ ಉಪಸ್ಥಿತರಿದ್ದರು. ಶಶಾಂಕ ನೆಲ್ಲಿತ್ತಾಯ, ದೇವಿಪ್ರಕಾಶ್ ಭಂಡಾರಿ ಪ್ರಶಸ್ತಿ ಪತ್ರವನ್ನು ವಾಚಿಸಿದರು.

ರಮಾನಂದ ನೆಲ್ಲಿತ್ತಾಯರು ಸ್ವಾಗತಿಸಿದರು. ಡಾ.ಶ್ರೀಧರ ಭಂಡಾರಿ ವಂದಿಸಿದರು. ಕಲಾವಿದ, ಪತ್ರಕರ್ತ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News