ನಾಡಿನೆಲ್ಲೆಡೆ ನಾಗರ ಪಂಚಮಿ ಸಂಭ್ರಮ

Update: 2016-08-08 05:27 GMT

 ಸುಬ್ರಹ್ಮಣ್ಯ, ಆ.7: ದಕ್ಷಿಣ ಭಾರತದ ಪ್ರಖ್ಯಾತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಪೂರ್ವ ಶಿಷ್ಠ ಸಂಪ್ರದಾಯದಂತೆ ಆಚರಿಸಲಾಯಿತು. ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ರಾಜ್ಯದ ಮೂಲೆ ಮೂಲೆಯಿಂದ ಹಾಗೂ ಸ್ಥಳೀಯ ಊರುಗಳಿಂದ ಆಗಮಿಸಿದ ಭಕ್ತಾಧಿಗಳು ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ಅಭಿಷೇಕ ಮಾಡಿ ಪ್ರಾರ್ಥನೆ ಸಲ್ಲಿಸಿದರು.

* ಸುಳ್ಯದಲ್ಲಿ ನಾಗರ ಪಂಚಮಿ ಆಚರಣೆ

ತಾಲೂಕಿನ ಹಲವೆಡೆಗಳಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಸುಳ್ಯ ಶ್ರೀಚೆನ್ನಕೇಶವ ದೇವಸ್ಥಾನದ ನಾಗನಕಟ್ಟೆ, ಶ್ರೀರಾಮ ಮಂದಿರದ ನಾಗನಕಟ್ಟೆಯಲ್ಲಿ ನಾಗರ ಪಂಚಮಿ ಆಚರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News