ನರ್ಮದಾ ಶಿಬರೂರಾಯ

Update: 2016-08-08 18:35 GMT


ಸುಳ್ಯ , ಆ.8: ಮಹಿಳಾ ಭಾಗವತರಾಗಿ ಜನಪ್ರಿಯರಾಗಿದ್ದ ಮಂಡೆಕೋಲಿನ ನರ್ಮದಾ ಶಿಬರೂರಾಯ(75)ಸೋಮವಾರ ಬೆಳಗ್ಗೆ ನಿಧನರಾದರು.
ಹಲವು ದಶಕಗಳ ಹಿಂದೆ ಭಾಗವತರಾಗಿ ಮಿಂಚಿದ್ದ ಅವರು ಹಲವರಿಗೆ ಯಕ್ಷಗಾನದ ಭಾಗವತಿಕೆಯನ್ನು ಕಲಿಸಿದ್ದರು. ಗ್ರಾಮೀಣ ಪರಿಸರದಲ್ಲಿ ಯಕ್ಷಗಾನದ ಕಂಪನ್ನು ಪಸರಿಸಿದ್ದರು. ಅವಿಭಜಿತ ಜಿಲ್ಲೆಯ ಮೊದಲ ಮಹಿಳಾ ಭಾಗವತರೆಂಬ ಕೀರ್ತಿಗೂ ಒಳಗಾಗಿದ್ದರು. ಇವರ ಪತಿ ಪುರುಷೋತ್ತಮ ಶಿಬರೂರಾಯರು ಎರಡು ತಿಂಗಳ ಹಿಂದೆ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News