ಡಿ.17-31: ಮಂಗಳೂರು ಪ್ರೀಮಿಯಂ ಲೀಗ್ ಕ್ರಿಕೆಟ್

Update: 2016-08-08 18:52 GMT

ಮಂಗಳೂರು,ಆ.8: ಕರ್ನಾಟಕ ರೀಜನಲ್ ಕ್ರಿಕೆಟ್ ಅಕಾಡಮಿ ವತಿಯಿಂದ ಮಂಗಳೂರು ಪ್ರೀಮಿಯಂ ಲೀಗ್ ಕ್ರಿಕೆಟ್ ಪಂದ್ಯಾಟ ಡಿಸೆಂಬರ್ 17 ರಿಂದ 31 ರವರೆಗೆ ಪಣಂಬೂರು ನವಮಂಗಳೂರು ಬಂದರಿನ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ರತನ್‌ಕುಮಾರ್ ಹೇಳಿದರು.
 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು, ದ.ಕ. ಹಾಗೂ ಉಡುಪಿ ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಲಯ ವ್ಯಾಪ್ತಿಯ 12 ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿದ್ದು, 20-20 ಓವರ್‌ಗಳ ಲೀಗ್ ಕಮ್ ನಾಕೌಟ್ ಆಧಾರದಲ್ಲಿ 34 ಪಂದ್ಯಗಳು ಜರಗಲಿವೆ. ಗಲ್ಫ್ ರಾಷ್ಟ್ರಗಳಲ್ಲಿ ಪ್ರತಿನಿಧಿಸುತ್ತಿರುವ 24 ಮಂದಿ ಅನಿವಾಸಿ ಭಾರತೀಯ ಆಟಗಾರರು 12 ತಂಡಗಳಲ್ಲಿ ಸೇರ್ಪಡೆಗೊಳ್ಳಲಿದ್ದಾರೆ. ರಾತ್ರಿ-ಹಗಲು ಪಂದ್ಯಗಳು ನಡೆಯಲಿದ್ದು, ಕಾರ್ಕಳ, ಕುಂದಾಪುರ, ಬೈಕಂಪಾಡಿ ಮತ್ತಿತರ ಹೊಸ ತಂಡಗಳು ಕಣಕ್ಕಿಳಿಯಲಿವೆ ಎಂದು ಹೇಳಿದರು.ಸಂದರ್ಭ ಮಾತನಾಡಿದ ಲೀಗ್ ಪಂದ್ಯಾಟ ಆಯೋಜಕ ಸದಸ್ಯ ಸಿರಾಜುದ್ದೀನ್, ಕಳೆದ ಬಾರಿ ಎಂಪಿಎಲ್‌ನಲ್ಲಿ ಭಾಗವಹಿಸಿದ್ದ ಮಂಗಳೂರು ವಲಯದ 24 ಮಂದಿ ಆಟಗಾರರ ಹೆಸರುಗಳು ಈ ಬಾರಿಯ ಕೆಪಿಎಲ್‌ನ ಹರಾಜು ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಅಲ್ಲದೇ 48 ಮಂದಿ ಆಟಗಾರರ ಪೈಕಿ 24 ಮಂದಿಯನ್ನು ‘ಎ’ ಗುಂಪು, ಉಳಿದವರನ್ನು ಬಿ ಮತ್ತು ಸಿ ಗುಂಪುಗಳಲ್ಲಿ ವಿಂಗಡಿಸಿ ಸೆಪ್ಟಂಬರ್ ತಿಂಗಳಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಆ.31ರೊಳಗೆ ಡಿಡಿಡಿ.ಝ್ಟ್ಚಿಜ್ಞಿಜಿ.್ಚಟಞ, ಡಿಡಿಡಿ.್ಛಚ್ಚಛಿಚಿಟಟ.್ಚಟಞ/ಞಟ್ಝಟ್ಛ್ಛಜ್ಚಿಜಿಚ್ಝ ನಲ್ಲಿ ಅಥವಾ ಹಂಪನಕಟ್ಟೆಯಲ್ಲಿರುವ ಕೆಆರ್‌ಸಿಎ ಕಚೇರಿಯಲ್ಲಿ ಉಚಿತವಾಗಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
 ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಸಂಚಾಲಕರುಗಳಾದ ಮನೋಹರ್ ಅಮೀನ್, ಇಮ್ತಿಯಾಜ್, ಪ್ರಧಾನ ಕಾರ್ಯಯೋಜಕ ಬಾಲಕೃಷ್ಣ ಪರ್ಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News