ತಾಪಂ ಸಭೆಯಲ್ಲಿ ಪ್ರತಿಧ್ವನಿಸಿದ ಅಟ್ರಿಂಜೆ ಕೊರಗರ ಬದುಕು

Update: 2016-08-09 18:49 GMT

ಬೆಳ್ತಂಗಡಿ, ಆ.9: ತಾಲೂಕಿನಲ್ಲಿ ಕೊರಗರ ಸ್ಥಿತಿಗತಿ ಚಿಂತಾಜನಕವಾಗಿದೆ. ಇನ್ನೂ ಮೂಲಭೂತ ಸೌಲಭ್ಯಗಳಿಲ್ಲದೆ ಅವರು ಬದುಕುತ್ತಿದ್ದಾರೆ. ಅವರಿಗಾಗಿಯೇ ಇರುವ ಇಲಾಖೆಗಳು ಅವರತ್ತ ತಿರುಗಿಯೂ ನೋಡುತ್ತಿಲ್ಲ. ಅಟ್ರಿಂಜೆಯ ಐದು ಕೊರಗ ಕುಟುಂಬಗಳ ಸ್ಥಿತಿಗತಿಯ ಬಗ್ಗೆ ತಕ್ಷಣ ಅಲ್ಲಿಗೆ ತೆರಳಿ ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಂಗಳವಾರ ನಡೆದ ಬೆಳ್ತಂಗಡಿ ತಾಪಂ ಸಾಮಾನ್ಯ ಸಭೆಯಲ್ಲಿ ಅಕಾರಿಗಳಿಗೆ ಸೂಚನೆ ನೀಡಲಾಯಿತು.

ತಾಪಂ ಅಧ್ಯಕ್ಷೆ ದಿವ್ಯಾ ಜ್ಯೋತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಜಿಪಂ ಸದಸ್ಯ ಶೇಖರ ಕುಕ್ಕೇಡಿ, ಕೊರಗ ಕುಟುಂಬಗಳು ಈ ರೀತಿ ಬದುಕುತ್ತಿದ್ದರೆ ಅದಕ್ಕೆ ಅಕಾರಿಗಳು, ಜನಪ್ರತಿನಿಗಳು ಸಮಾನ ಜವಾಬ್ದಾರರು. ಈ ಐದು ಕುಟುಂಬಗಳ ಬಗ್ಗೆ ವಿವಿಧ ಇಲಾಖೆಗಳಿಗೆ ಯಾಕೆ ಮಾಹಿತಿ ಸಿಕ್ಕಿಲ್ಲ? ಎಂದು ಪ್ರಶ್ನಿಸಿದರಲ್ಲದೆ, ಕೊರಗ ಕುಟುಂಬಗಳು ಈ ರೀತಿ ಬದುಕನ್ನು ನಡೆಸುವಂತಾಗಲು ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಅಕಾರಿಗಳು, ಶಿಕ್ಷಣ ಇಲಾಖೆ , ಕಂದಾಯ ಇಲಾಖೆಗಳು ಕಾರಣವಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಚರ್ಚೆ ನಡೆದು ಕುಟುಂಬಗಳ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಸಂಬಂಸಿದ ಎಲ್ಲ ಇಲಾಖಾಕಾರಿಗಳು ಕೂಡಲೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲು ಸಭೆ ನಿರ್ಧರಿಸಿತು. ಈ ಕುಟುಂಬಗಳಿಗೆ ಜಮೀನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ತಿಳಿಸಿದರು. ಜಮೀನು ದೊರೆತರೆ ಮನೆ ಕಟ್ಟಿಕೊಡಲು ಸಿದ್ಧರಿರುವುದಾಗಿ ಸಮಾಜಕಲ್ಯಾಣ ಇಲಾಖೆಯ ಅಕಾರಿಗಳು ಸ್ಪಷ್ಟಪಡಿಸಿದರು.ಪ್ರಕೃತಿ ವಿಕೋಪದಡಿಯಲ್ಲಿ ಪರಿಹಾರ ನೀಡುವ ಕಾರ್ಯ ಗ್ರಾಮ ಮಟ್ಟದಲ್ಲೇ ಆಗಬೇಕು ಎಂದು ಈ ಹಿಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಣಯಕ್ಕೆ ತದ್ವಿರುದ್ಧವಾಗಿ ಅಧ್ಯಕ್ಷರು ನಡೆದುಕೊಂಡಿದ್ದಾರೆ ಎಂದು ಸದಸ್ಯೆ ವಸಂತಿ ಆರೋಪಿಸಿದರು.

ತಹಶೀಲ್ದಾರ್ ಪ್ರಸನ್ನ ಮೂರ್ತಿ ಮಾತನಾಡಿ, ಸಾಧ್ಯವಾದಷ್ಟು ಪರಿಹಾರವನ್ನು ಲಾನುಭವಿಗಳ ಮನೆಗೇ ಹೋಗಿ ಕೊಟ್ಟಿದ್ದೇವೆ. ಸಿಗದವರಿಗೆ ತಾಲೂಕು ಕಚೇರಿಗೆ ಬರ ಹೇಳಿದ್ದೇವೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಜಿಪಂ ಸದಸ್ಯರಾದ ಕೊರಗಪ್ಪನಾಯ್ಕ, ಶೇಖರ ಕುಕ್ಕೇಡಿ, ತಾಪಂ ಸದಸ್ಯ ಶಶಿಧರ ಕಲ್ಮಂಜ ಚರ್ಚೆಯಲ್ಲಿ ಪಾಲ್ಗೊಂಡರು.
ಸಭೆಯಲ್ಲಿ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಾಪಂ ಉಪಾಧ್ಯಕ್ಷೆ ವೇದಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುೀರ್ ಸುವರ್ಣ, ತಾಪಂ ಕಾರ್ಯನಿರ್ವಹಣಾಕಾರಿ ಸಿ.ಆರ್. ನರೇಂದ್ರ, ತಹಶೀಲ್ದಾರ್ ಪ್ರಸನ್ನಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News