ಮಸಾಜ್ ಸೆಂಟರ್‌ಗೆ ದಾಳಿ: ಇಬ್ಬರ ಬಂಧನ

Update: 2016-08-10 17:31 GMT

ಮಂಗಳೂರು, ಆ.10: ನಗರದ ಕೆಎಸ್ಸಾರ್ಟಿಟಿಸಿ ಬಳಿ ಕಾರ್ಯನಿರ್ವಹಿಸುತ್ತಿದ್ದ ಮಸಾಜ್ ಸೆಂಟರ್‌ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಬರ್ಕೆ ಪೊಲೀಸರುದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾರ್‌ಸ್ಟ್ರೀಟ್‌ನ ಸಂದೀಪ್ ಮೋಹನ್ (31), ಕಾಂಞಿಂಗಾಡ್‌ನ ಲೂಕೋಸ್ (51) ಎಂದು ಗುರುತಿಸಲಾಗಿದೆ. ಇತರ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು, ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮಸಾಜ್ ಸೆಂಟರ್‌ನ ಮಾಲಕ ವೇಣುಗೋಪಾಲ ತಲೆ ಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ. ಕಾರ್ಯಚರಣೆಯನ್ನು ಬರ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜೇಶ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News