ಆ.14ರಂದು ಎಸ್‌ಐಒನಿಂದ ಸಾರ್ವಜನಿಕ ಸಮಾವೇಶ

Update: 2016-08-12 09:48 GMT

ಮಂಗಳೂರು, ಆ.12: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆ್ ಇಂಡಿಯಾ(ಎಸ್‌ಐ) ಕರ್ನಾಟಕ ಇದರ ವತಿಯಿಂದ ‘ರಚನಾತ್ಮಕ ಸಮಾಜಕ್ಕಾಗಿ ಸಂತುಲಿತ ಚಿಂತನೆ: ತೀವ್ರವಾದವನ್ನು ವಿರೋಧಿಸೋಣ, ಹಿತವಾದಿಗಳಾಗೋಣ’ ಅಭಿಯಾನದ ಪ್ರಯುಕ್ತ ಮಂಗಳೂರು ವಲಯ ಸಾರ್ವಜನಿಕ ಸಮಾವೇಶವು ಆ.14ರಂದು ಸಂಜೆ 4:30ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಸ್‌ಐಒ ರಾಜ್ಯ ಸಲಹಾ ಸಮಿತಿ ಸದಸ್ಯ ತಲ್ಹಾ ಇಸ್ಮಾಯೀಲ್ ಕೆ.ಪಿ., ರಾಜ್ಯದ ವಿವಿಧೆಡೆಗಳಲ್ಲಿ ಸಾರ್ವಜನಿಕ ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಾಜದ ವೈವಿಧ್ಯ ಸಂಸ್ಕೃತಿ, ಭಾಷೆ, ಧರ್ಮ, ಆಚಾರ, ವಿಚಾರಗಳ ಬಗ್ಗೆ ಸಂವೇದನಾಶೀಲತೆಯೊಂದಿಗೆ ಸಮತೋಲನದ ನಿಲುವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಸಲುವಾಗಿ ಮತ್ತು ಯುವ ಶಕ್ತಿಯನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿ ಅವರನ್ನು ದೇಶದ ಸಮಗ್ರ ಪ್ರಗತಿಗೆ ವಿನಿಯೋಗಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಪಾಣೆಮಂಗಳೂರು ಎಸ್‌ಐಒ ಅಧ್ಯಕ್ಷ ದಾನೀಶ್ ಪಾಣೆಮಂಗಳೂರು, ಜಿಲ್ಲಾ ಸದಸ್ಯ ಬಾಸಿತ್ ಉಪ್ಪಿನಂಗಡಿ, ಮಾಧ್ಯಮ ಕಾರ್ಯದರ್ಶಿ ಇರ್ಷಾದ್ ವೇಣೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News