ತಲಪಾಡಿ-ಕಣ್ಣೂರು ಹೆದ್ದಾರಿ ಚತುಷ್ಪಥಕ್ಕೆ ಡಿಸೆಂಬರ್ ನಲ್ಲಿ ಟೆಂಡರ್?

Update: 2016-08-13 05:08 GMT

ಕಾಸರಗೋಡು, ಆ.13: ಕರ್ನಾಟಕ-ಕೇರಳ ಗಡಿ ಪ್ರದೇಶವಾದ ತಲಪಾಡಿಯಿಂದ ಕಣ್ಣೂರು ತನಕ ಮೊದಲ  ಹಂತದಲ್ಲಿ  ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಒಂದೇ ಹಂತದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸುವ ಕುರಿತು ಈಗಾಗಲೇ  ಒಮ್ಮತಕ್ಕೆ  ಬರಲಾಗಿದೆ.ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಯೋಜನೆಯ ಟೆಂಡರು ಪ್ರಕ್ರಿಯೆ  ಡಿಸೆ೦ಬರ್ ನಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಹೆದ್ದಾರಿ ನಿರ್ಮಾಣಕ್ಕೆ ಭೂ ಸ್ವಾಧೀನ ಕುರಿತ ವರದಿಯನ್ನು  ಜಿಲ್ಲಾಧಿಕಾರಿಗಳು ಈಗಾಗಲೇ ರಾಜ್ಯ ಸರಕಾರಕ್ಕೆ  ಹಸ್ತಾ೦ತರಿಸಿದ್ದಾರೆ. ಭೂ ಸ್ವಾಧೀನ ಕುರಿತ ಗೊಂದಲ ನಿವಾರಣೆ ಬಗ್ಗೆ ಈಗಾಗಲೇ ಅಧಿಕಾರಿಗಳು ಮತ್ತು  ಸಂಘಟನೆಗಳ ಜೊತೆ ಮಾತುಕತೆ ನಡೆಸಿ ಇತ್ಯರ್ಥಕ್ಕೆ ಮುಂದಾಗಿದ್ದಾರೆ. ಪರಿಹಾರ ಕಲ್ಪಿಸಲು ಸಾಧ್ಯವಾಗದ ಸ್ಥಳಗಳ ಬಗ್ಗೆ  ಲೋಕೋಪಯೋಗಿ ಕಾರ್ಯದರ್ಶಿ ನೇರವಾಗಿ ಭೇಟಿ ಮಾಡಲು ತೀರ್ಮಾನಿಸಿದ್ದಾರೆ.

ಕಾನೂನಿನಂತೆ ಶೇಕಡಾ 80ರಷ್ಟು ಭೂಸ್ವಾಧೀನವಾದಲ್ಲಿ ಮಾತ್ರ  ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಆದರೆ ಕೇರಳದ ಸ್ಥಿತಿಗತಿ ಮನಗಂಡು  60 ಶೇಕಡಾ ಸ್ಥಳ ಸ್ವಾಧೀನವಾದಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು  ಕೇಂದ್ರ ಹೆದ್ದಾರಿ ಸಚಿವಾಲಯಕ್ಕೆ ಅನುಮತಿ ನೀಡಿದೆ ಎನ್ನಲಾಗಿದೆ.

ರಾಷ್ಟೀಯ ಹೆದ್ದಾರಿ  ಅಭಿವೃದ್ಧಿಗೆ  ಒಟ್ಟು 3400 ಎಕರೆ ಸ್ಥಳ ಸ್ವಾಧೀನ ಪಡಿಸಬೇಕಿದೆ. 45. ಮೀಟರ್ ಅಗಲದಲ್ಲಿ ರಸ್ತೆ ಅಗಲೀಕರಣಗೊಳ್ಳಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News