ಜೋಸ್ ಆಲುಕ್ಕಾಸ್‌ನ ಮಂಗಳೂರಿನ ಅತಿ ದೊಡ್ಡ ಆಭರಣ ಮಳಿಗೆ ಶುಭಾರಂಭ

Update: 2016-08-13 07:25 GMT

ಮಂಗಳೂರು,ಆ.13: ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದಾದ ಜೋಸ್ ಆಲುಕ್ಕಾಸ್‌ನ ಮಂಗಳೂರಿನ ಅತೀ ದೊಡ್ಡ ಆಭರಣ ಮಳಿಗೆಯನ್ನು ನಗರದ ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ವಿಶೇಷ ಅತಿಥಿಗಳಾಗಿ ಬಹುಭಾಷಾ ನಟಿ ಅಮಲಾ ಪಾಲ್ ಹಾಗೂ ತುಳು ಚಿತ್ರರಂಗದ ಖ್ಯಾತ ನಟ ರೂಪೇಶ್ ಶೆಟ್ಟಿ ಭಾಗವಹಿಸಿದ್ದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲು, ಕೇರಳ ಮೂಲದ ಅತೀ ದೊಡ್ಡ ಚಿನ್ನಾಭರಣಗಳ ಸಂಸ್ಥೆಯಾದ ಜೋಸ್ ಆಲುಕ್ಕಾಸ್ ಕಳೆದ 11 ವರ್ಷಗಳಿಂದ ಜಿಲ್ಲೆಯ ಗ್ರಾಹಕರ ಬೇಡಿಕೆಗೆ ತಕ್ಕುದಾದ ವಜ್ರ ಹಾಗೂ ಚಿನ್ನಾಭರಣಗಳನ್ನು ಮಾರಾಟ ಮಾಡುವ ಮೂಲಕ ಗಮನ ಸೆಳೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮನಪಾ ಸದಸ್ಯ ಎ.ಸಿ. ವಿನಯ ರಾಜ್ ಮಳಿಗೆಯಲ್ಲಿ ಪ್ಲಾಟಿನಂ ವಿಭಾಗಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಜೋಸ್ ಆಲುಕ್ಕಾಸ್ ಗ್ರೂಪ್‌ನ ಅಧ್ಯಕ್ಷ ಜೋಸ್ ಆಲುಕ್ಕಾ, ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಆಲುಕ್ಕಾ, ಪೌಲ್ ಜೆ. ಆಲುಕ್ಕಾ, ಜಾನ್ ಆಲುಕ್ಕಾ ಉಪಸ್ಥಿತರಿದ್ದರು.

ಶೋರೂಂ ಗ್ರಾಹಕರಿಗೆ ಅದ್ಭುತವಾದ ಅನುಭವವನ್ನು ನೀಡಲಿದೆ. ಸಂಸ್ಥೆಯು ಕೇವಲ ಸರಕಾರದಿಂದ ಪ್ರಮಾಣೀಕೃತ ಬಿಐಎಸ್ ಹಾಲ್ ಮಾರ್ಕ್ ನ  ಚಿನ್ನಾಭರಣಗಳನ್ನು ಮಾತ್ರವೇ ಪ್ರದರ್ಶಿಸುತ್ತದೆ. ಜೋಸ್ ಆಲುಕ್ಕಾಸ್‌ನಲ್ಲಿರುವ ವಜ್ರಗಳ ಸಂಗ್ರಹ ಅಂತಾರಾಷ್ಟ್ರೀಯ ಪ್ರಯೋಗಾಲಯಗಳಿಂದ ಪ್ರಮಾಣೀಕರಿಸಲ್ಪಟ್ಟಿದೆ. ಜೋಸ್ ಆಲುಕ್ಕಾಸ್ ವಿಶಿಷ್ಟ ವಿವಾಹ ಆಭರಣ ಶ್ರೇಣಿ, ‘ಶುಭ ಮಾಂಗಲ್ಯಂ’ ಮತ್ತು ‘ಪರಂಪರಾ’ ಎನ್ನುವ ಸಾಂಪ್ರದಾಯಿಕ ಆಭರಣಗಳನ್ನು ಹೊಂದಿದೆ. ಹಗುರವಾದ ಆಭರಣಗಳು, ಕತ್ತರಿಸದ ವಜ್ರಗಳು ಮತ್ತು ಅಮೂಲ್ಯ ಹರಳುಗಳ ಆಭರಣಗಳ ವಿಶೇಷ ಸಂಗ್ರಹ ಕೂಡಾ ಮಳಿಗೆಯಲ್ಲಿದೆ ಎಂದು ಗ್ರೂಪ್‌ನ ಅಧ್ಯಕ್ಷ ಜೋಸ್ ಆಲುಕ್ಕಾಸ್ ತಿಳಿಸಿದ್ದಾರೆ.

ದಿನಬಳಕೆಯ ವಜ್ರಾಭರಣಗಳು 4,000 ರೂ.ಗಳಿಂದ ಆರಂಭವಾಗುತ್ತಿದ್ದು, ವಜ್ರದ ಶ್ರೇಣಿಗಳು ವಿಶಿಷ್ಟ ವಿವಾಹ ಆಭರಣಗಳವರೆಗೂ ವಿಭಿನ್ನ ಶ್ರೇಣಿಯನ್ನು ಹೊಂದಿದೆ. ಮಳಿಗೆ ಆರಂಭಿಕ ಕೊಡುಗೆಯಾಗಿ 30,000 ರೂ. ಮೇಲ್ಪಟ್ಟ ಚಿನ್ನಾಭರಣ ಖರೀದಿಗೆ 1 ಗ್ರಾಂ ಚಿನ್ನದ ನಾಣ್ಯ ಹಾಗೂ ವಜ್ರಾಭರಣಗಳ ಖರೀದಿಗೆ ಶೇ. 20ರಷ್ಟು ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News