ಕಾಡೂರು: ಯುವತಿ ನಾಪತ್ತೆ

Update: 2016-08-14 18:41 GMT

ಬ್ರಹ್ಮಾವರ, ಆ.14: ಕಾಡೂರು ಮಂದಾರಬೆಟ್ಟು ಎಂಬಲ್ಲಿನ ಮನೆಯೊಂದಕ್ಕೆ ಹೋಮ್‌ನರ್ಸಿಂಗ್ ಕೆಲಸಕ್ಕೆ ನಿಯೋಜಿಸಲಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ತಾರಾ (20) ಎಂಬಾಕೆ ಆರು ತಿಂಗಳುಗಳಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮಂಗಳೂರಿನ ಜನನಿ ಎಂಟರ್‌ಪ್ರೈಸಸ್ ಹೋಮ್‌ಮೇಡ್ ನರ್ಸಿಂಗ್ ಸರ್ವಿಸ್ ಸೆಂಟರ್‌ನಿಂದ ತಾರಾ ಅವರನ್ನು ಮಂದಾರಬೆಟ್ಟುವಿನ ಲಕ್ಷ್ಮೀ ಶೆಟ್ಟಿ ಎಂಬವರ ಮನೆಯಲ್ಲಿ ಕೆಲಸಕ್ಕೆ ಸೇರಿಸಲಾಗಿತ್ತು. ಮನೆಯವರ ಹೇಳಿಕೆ ಪ್ರಕಾರ 2016ರ ಫೆಬ್ರವರಿ ತಿಂಗಳಲ್ಲಿ ಮನೆ ಕೆಲಸ ಬಿಟ್ಟು ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಹೋಗಿದ್ದಾರೆ. ಆದರೆ ಆಕೆ ಈವರೆಗೆ ಮನೆ ಅಥವಾ ಕಚೇರಿಗೆ ಹೋಗದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News