‘ಛಾಯಾಚಿತ್ರಗ್ರಾಹಕರು ಸಮಾಜದ ಕಣ್ಣುಗಳು’

Update: 2016-08-14 18:56 GMT

ಶಿರ್ವ, ಆ.14: ಸಮಾಜದ ಕುಂದುಕೊರತೆ, ಅಶಕ್ತರು, ದುರ್ಬಲರು ಹಾಗೂ ಪ್ರಚಲಿತ ಜನಸಾಮಾನ್ಯರ ಸಮಸ್ಯೆಗಳನ್ನು ಸೆರೆಹಿಡಿದು ಸರಕಾರದ ಹಾಗೂ ಸಮಾಜದ ಗಮನ ಸೆಳೆಯುವಲ್ಲಿ ಛಾಯಾ ಚಿತ್ರಗ್ರಾಹಕರ ಸೇವೆ ಸ್ಮರಣೀಯ. ಇವರು ಸಮಾಜದ ಕಣ್ಣುಗಳು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

 ದ.ಕ. ಹಾಗೂ ಉಡುಪಿ ಜಿಲ್ಲೆಗಳ ಸೌತ್ ಕೆನರಾ ಫೋಟೊಗ್ರಾಫರ್ಸ್‌ ಅಸೋಸಿಯೇಶನ್‌ನ ಕಾಪು ವಲಯದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸೇವಾ ಚಟುವಟುಕೆಗಳ ಕಾರ್ಯಕ್ರಮವನ್ನು ಶಿರ್ವ ಮೋನಿಸ್ ಕಾಂಪ್ಲೆಕ್ಸ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ಅದಾನಿ ಗ್ರೂಪ್ಸ್‌ನಿಂದ ಕಾಪು ವಲಯ ಫೋಟೊ ಗ್ರಾಫರ್ಸ್‌ಗೆ ಆಕಸ್ಮಿಕ ಘಟನೆಗಳಿಗೆ ಸಹಕಾರಿಯಾಗುವಂತೆ ವಿಮಾಯೋಜನೆ ಯನ್ನು ನೀಡಲಾಗುವುದು. ಅಲ್ಲದೆ ಉತ್ತಮ ಛಾಯಾಚಿತ್ರಗ್ರಾಹಕರನ್ನು ಆಯ್ಕೆ ಮಾಡಿ ಗೌರವಿಸುವ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭ ಹಿರಿಯ ಪ್ರಗತಿಪರ ಕೃಷಿಕ ಎಸ್.ಕೆ.ಸಾಲ್ಯಾನ್ ಬೆಳ್ಮಣ್, ನಾಟಿವೈದ್ಯೆ ಶಾಲಿನಿ ಶಿರ್ವ, ಯುವ ಪ್ರತಿಭೆ ಪ್ರಿಯಾಂಕಾ ರೊಡ್ರಿಗಸ್‌ರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾ ಯಿತು.

ನೂತನ ಅಧ್ಯಕ್ಷರಾಗಿ ಉದಯ್ ಮುಂಡ್ಕೂರು, ಕಾರ್ಯದರ್ಶಿ ವಿರೇಂದ್ರ ಪೂಜಾರಿ, ಕೋಶಾಧಿಕಾರಿ ಸಂತೋಷ್ ಕಾಪು ಹಾಗೂ ಸಮಿತಿ ಸದಸ್ಯರ ಪದಗ್ರಹಣ ನಡೆಯಿತು. ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಸುವರ್ಣ, ಕಾರ್ಯದರ್ಶಿ ಸಂತೋಷ್, ಕೋಶಾಧಿಕರಿ ಪ್ರಶಾಂತ್ ಎರ್ಮಾಳ್ ಅಧಿಕಾರ ಹಸ್ತಾಂತರಿಸಿದರು.

ಎಸ್‌ಕೆಪಿಎ ಜಿಲ್ಲಾಧ್ಯಕ್ಷ ಜಗನ್ನಾಥ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಐದು ವಲಯಗಳ ಅಧ್ಯಕ್ಷ ವಾಸುದೇವ ರಾವ್, ಹಿರಿಯರಾದ ದಾಸಪ್ಪಪುತ್ರನ್, ಭಕ್ತಪ್ರಸಾದ್, ಪ್ರಸಾದ್ ಪ್ರಭು ಉಪಸ್ಥಿತರಿದ್ದರು.

ಪ್ರಮೋದ್ ಸುವರ್ಣ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ವಿರೇಂದ್ರ ಪೂಜಾರಿ ಶಿರ್ವ ವಂದಿಸಿದರು. ರಾಘವೇಂದ್ರ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News