ಸ್ವಾತಂತ್ರ ದೇಶಕ್ಕೆ ಮಾತ್ರವಲ್ಲ ಮನಸ್ಸಿಗೂ ಅಗತ್ಯ: ಗುರುಪ್ರಸಾದ್

Update: 2016-08-15 18:49 GMT

ಕಾರ್ಕಳ, ಆ.15: ಸ್ವಾತಂತ್ರ ಕೇವಲ ದೇಶಕ್ಕೆ ಮಾತ್ರವಲ್ಲ, ನಾಗರಿಕರ ಬದುಕಿಗೆ ಹಾಗೂ ಮನಸ್ಸಿಗೂ ಬೇಕು. ಸಂಕುಚಿತತೆ, ಧರ್ಮಾಂಧತೆ, ಜಾತೀಯತೆಗಳೆಲ್ಲವನ್ನೂ ನಾವು ಮೀರಬೇಕು. ವಿಶಾಲ ಮನೋವೃತ್ತಿಯನ್ನು ಬೆಳೆಸುವುದರ ಮೂಲಕ ಗ್ರಾಮ, ವಲಯ, ದೇಶದ ಐಕ್ಯತೆ ಹಾಗೂ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಕಾರ್ಕಳ ತಹಶೀಲ್ದಾರ್ ಗುರುಪ್ರಸಾದ್ ಅಭಿಮತ ವ್ಯಕ್ತಪಡಿಸಿದರು.

ಕಾರ್ಕಳದ ಗಾಂಧಿ ಮೈದಾನದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಹಾಗೂ ಕಾರ್ಕಳ ಪುರಸಭೆ ಆಶ್ರಯದಲ್ಲಿ ಜರಗಿದ 70ನೆ ಸ್ವಾತಂತ್ರೋತ್ಸವದಲ್ಲಿ ಧ್ವಜಾರೋಹಣಗೈದ ಅವರು, ಪಥಸಂಚಲನದ ಗೌರವ ಸ್ವೀಕರಿಸಿ ಮಾತನಾಡಿದರು. ಕಾರ್ಕಳ ಅನಂತಶಯನದ ವೃತ್ತದಲ್ಲಿ ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಾರ್ಕಳ ಪೊಲೀಸರ ತಂಡವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಗ್ರಾಮಾಂತರ ಠಾಣಾಧಿಕಾರಿ ರಫೀಕ್ ಪರೇಡ್ ಕಮಾಂಡರಾಗಿ ಪಥಸಂಚಲನದ ನೇತೃತ್ವ ವಹಿಸಿದ್ದರು. ಶಾಸಕ ಹಾಗೂ ವಿಧಾನಸಭೆ ಪ್ರತಿಪಕ್ಷ ಮುಖ್ಯಸಚೇತಕ ವಿ.ಸುನೀಲ್‌ಕುಮಾರ್, ಎಎಸ್ಪಿ ಡಾ. ಸುಮನಾ.ಡಿ ಗೌರವ ರಕ್ಷೆ ಸ್ವೀಕರಿಸಿದರು.

ಪೊಲೀಸ್ ವೃತ್ತನಿರೀಕ್ಷಕ ಜಾನ್ ಅಂತೋನಿ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್.ಕೋಟ್ಯಾನ್, ಶಿಕ್ಷಣಾಧಿಕಾರಿ ಮನಮೋಹನ್, ಪುರಸಭಾ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಮಾಜಿ ಅಧ್ಯಕ್ಷರುಗಳಾದ ಎನ್.ಆರ್.ಸುಭೀತ್, ರಹಮತ್ ಎನ್.ಶೇಖ್, ಪ್ರತಿಮಾ ಮೋಹನ್ ರಾಣೆ, ಮಾಜಿ ಉಪಾಧ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ದೇವಾಡಿಗ, ಸದಸ್ಯರಾದ ಅಶ್ಫಾಕ್ ಅಹ್ಮದ್, ಮುಹಮ್ಮದ್ ಶರೀಫ್, ಶ್ರೀಧರ್, ಲಲಿತಾ ಭಟ್, ಪಾರ್ಶ್ವನಾಥ ವರ್ಮ, ಶಾಂತಿ ಶೆಟ್ಟಿ, ಅಕ್ಷಯ್ ರಾವ್, ಶುಭದರಾವ್, ಪ್ರಕಾಶ್ ರಾವ್, ಮಾಯಾ ದಿವ್ಯಾ ಡಿ.ಪೈ, ಯೋಗೀಶ್ ದೇವಾಡಿಗ, ಸುನಿಲ್ ಕೋಟ್ಯಾನ್, ವಿವೇಕಾನಂದ ಶೆಣೈ, ಭೂಸೇನಾ ಮೇಜರ್ ಪ್ರಮೋದ್ ಪ್ರಭು, ತಾಪಂ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ತಾಪಂ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ, ಪುರಸಭಾ ಮುಖ್ಯಾಧಿಕಾರಿ ರಾಯಪ್ಪ, ಹಿರಿಯ ಆರೋಗ್ಯ ನಿರೀಕ್ಷಕ ಸುಂದರ ಪೂಜಾರಿ, ಕಂದಾಯ ನಿರೀಕ್ಷಕ ಸಂತೋಷ್, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News