ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣ

Update: 2016-08-16 18:25 GMT

ಗುರುವಾಯನಕೆರೆ, ಆ.16: ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ ವರದಿ ಹೀಗೇ ಇರುತ್ತದೆಂದು ಸಿಐಡಿ ಮುಖ್ಯಸ್ಥರೇ ಈ ಹಿಂದೆ ಹೇಳಿದ್ದರು. ಎಲ್ಲಾ ಸಾಕ್ಷ್ಯನಾಶವಾಗಿರುವುದರಿಂದ ಸಂತೋಷ್ ರಾವ್ ಕೊಲೆಗಾರ ಎಂದು ಸಾಬೀತುಪಡಿಸಲು ಸಿಬಿಐಗೆ ಸಾಧ್ಯವೇ? ಹಾಗಾದರೆ ಕೊಲೆಗಾರ ಯಾರು? ಎಂದು ಜಂಟಿ ಕ್ರಿಯಾ ಸಮಿತಿಯು ಧರ್ಮಸ್ಥಳ ಹಿತರಕ್ಷಣಾ ವೇದಿಕೆಯನ್ನು ಪ್ರಶ್ನಿಸಿದೆ. ಶ್ರೀಕ್ಷೇತ್ರ ಧರ್ಮಸ್ಥಳ ನಮ್ಮೆಲ್ಲರ ಶ್ರದ್ಧಾಕೇಂದ್ರವಾಗಿದ್ದು ಇದರ ಪಾವಿತ್ರ್ಯ, ರಕ್ಷಣೆ ಸಮಸ್ತ ಹಿಂದೂ ಸಮಾಜದ ಜವಾಬ್ದಾರಿ. ಬೆರಳೆಣಿಕೆಯ ಧರ್ಮಸ್ಥಳದ ನಾಗರಿಕರದ್ದು ಮಾತ್ರ ಅಲ್ಲ ಎಂಬುದು ತಿಳಿದಿರಲಿ. ಕ್ಷೇತ್ರದ ಹೆಸರಿನಲ್ಲಿ ಹೆಗ್ಗಡೆ ಕುಟುಂಬದಿಂದ ಆಗಿರುವ, ಆಗುತ್ತಿರುವ ಎಲ್ಲಾ ಅವ್ಯವಹಾರ, ಕಾನೂನು ಉಲ್ಲಂಘನೆ, ಭೂಹಗರಣ, ಶೋಷಣೆ, ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ, ಕಾನೂನು ಸಮರ ಸಾರಿರುವ ವ್ಯಕ್ತಿಗಳನ್ನು, ಸಂಸ್ಥೆಗಳನ್ನು, ಸ್ವಾಮೀಜಿಯನ್ನು ಹಗುರವಾಗಿ ಪರಿಗಣಿಸುವ ದುಸ್ಸಾಹಸ ಮಾಡಿದಲ್ಲಿ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಬೇಕಾದೀತು ಎಂದು ಎಚ್ಚರಿಸಿದೆ.
 ಸಮಿತಿಯ ಪ್ರಧಾನ ಸಂಚಾಲಕ, ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಪ್ರಜಾಪ್ರಭುತ್ವ ವೇದಿಕೆಯ ಸಂಚಾಲಕ ಅನಿಲ್ ಕುಮಾರ್ ವಂದಿಸಿದರು. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ), ಮಲೆಕುಡಿಯರ ಸಮಾಜ ಸುಧಾರಣಾ ಟ್ರಸ್ಟ್, ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ), ಕೃಷಿಕರ ವೇದಿಕೆ ಕರ್ನಾಟಕ, ಕರಾವಳಿ ಮಹಿಳಾ ಜಾಗೃತಿ ವೇದಿಕೆ, ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ, ದಲಿತ ಅಭಿವೃದ್ಧಿ ಸಮಿತಿ, ದ.ಕ. ಪರಿಸರಾಸಕ್ತರ ಒಕ್ಕೂಟ, ಸೌಜನ್ಯಾ ತಾಯಿ, ತಂದೆ ಮತ್ತು ಮಾವ, ಮೊಗೇರ ಸಮಾಜ ಜಾಗೃತಿ ಟ್ರಸ್ಟ್ ಮತ್ತಿತರ ಸಮಾನಾಸಕ್ತ ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News