ಕಡಬ: ಶಾಸಕ ಅಂಗಾರರಿಂದ ಪಿಜಕ್ಕಳ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ

Update: 2016-08-17 16:13 GMT

ಕಡಬ, ಆ. 16: ಗ್ರಾಮ ಆಭಿವೃದ್ಧಿ ಹೊಂದಬೇಕಾದಲ್ಲಿ ಸುಸಜ್ಜಿತ ರಸ್ತೆ ಸಂಪರ್ಕವು ಅಗತ್ಯವಾಗಿದ್ದು, ಸುಳ್ಯ ವಿಧಾನಸಬಾ ಕ್ಷೇತ್ರದ ಬಾಕಿ ಉಳಿದಿರುವ ಬಹುತೇಕ ಗ್ರಾಮೀಣ ರಸ್ತೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿಗೊಳಿಸಲಾಗುವುದು ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.

ಸುಮಾರು 1.42 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಕಡಬ-ಪಿಜಕ್ಕಳ ರಸ್ತೆಯ ಕಾಮಗಾರಿಯನ್ನು ವೀಕ್ಷಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸದ್ರಿ ರಸ್ತೆ ಅಭಿವೃದ್ಧಿಯಾಗುವ ಮೂಲಕ ಸ್ಥಳೀಯ ಜನರ ಬಹುಕಾಲದ ಬೇಡಿಕೆ ಈಡೇರಿದೆ ಎಂದರು.

ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ ಮಾತನಾಡಿ, ಅತ್ಯಂತ ನಾದುರಸ್ತಿ ಸ್ಥಿತಿಯಲ್ಲಿದ್ದ ಸದ್ರಿ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಕ್ರಮ ಕೈಗೊಂಡ ಶಾಸಕರಿಗೆ ಸ್ಥಳೀಯ ಫಲಾನುಭವಿಗಳು ಕೃತಜ್ಞರಾಗಿದ್ದಾರೆ ಎಂದರು.

ಕಡಬ ಬಿಜೆಪಿ ಶಕ್ತಿಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್, ಕಡಬ ಸಿ.ಎ. ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ನಿರ್ದೇಶಕ ಪೂವಪ್ಪ ಗೌಡ ಐತ್ತೂರು, ಗ್ರಾ.ಪಂ. ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಎಡಸುಂಗಲ ಗ್ರಾ.ಪಂ. ಸದಸ್ಯ ಸುರೇಶ್ ಕಲ್ಲೆಂಬಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಎ.ಬಿ. ಮನೋಹರ ರೈ, ಪ್ರಮುಖರಾದ ಗಿರೀಶ್ ಎ.ಪಿ., ಜಯರಾಮ ಆರ್ತಿಲ, ಮೋನಪ್ಪ ಗೌಡ ನಾಡೋಳಿ, ಶ್ರೀಧರ ಗೌಡ ಕಾಪಾರು, ಅಶೋಕ್‌ಕುಮಾರ್ ಪಿ., ಪಯಾರ್ ಕೆನರಾ, ಕಾರ್ತಿಕ್ ಗೌಡ, ಸುರೇಶ್ ದೇಂತಾರ್, ಸಂತೋಷ್‌ಕುಮಾರ್ ಕೋಡಿಬೈಲ್, ಅಡ್ಕಾಡಿ ಪುತ್ತು, ಯತೀಶ ಹೊಸಮನೆ, ಉದಯ ಪೂವಳ, ವಿಶ್ವನಾಥ ಆರ್ತಿಲ, ಶಶಾಂಕ ಗೋಖಲೆ, ಲೋಕೇಶ್ ಆರ್ತಿಲ, ದಯಾನಂದ ಗೌಡ ಆರಿಗ ಕಂಗುಳೆ, ಸಚಿನ್ ಪಿಜಕ್ಕಳ, ವೇಣುಗೋಪಾಲ ರೈ ಕೊಲ್ಲಡ್ಕ, ದಯಾನಂದ ಗೌಡ ಪೊಯ್ಯೆತ್ತಡ್ಡ, ಪ್ರಸಾದ್ ಅಲುಂಗೂರು ಮುಂತಾದವರು ಹಾಜರಿದ್ದರು.

ಕಡಬ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ. ವಂದಿಸಿದರು. ಜಯರಾಮ ಗೌಡ ಆರ್ತಿಲ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News