ಗಂಗೊಳ್ಳಿ: ತೌಹೀದ್ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

Update: 2016-08-17 18:32 GMT

ಗಂಗೊಳ್ಳಿ, ಆ.17: ಇಲ್ಲಿನ ತೌಹೀದ್ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಕೋಟೇಶ್ವರದ ನಿವೃತ್ತ ಉಪನ್ಯಾಸಕ ಬಿ.ಮೊಹಿದ್ದಿನ್ ಸಾಹೇಬ್ ಧ್ವಜಾರೋಹಣಗೈದು ಸಂದೇಶ ನೀಡಿದರು.

ಟ್ರಸ್ಟಿ ಮುತಹ್ಹಿರ್ ಎಂ.ಎಚ್. ಅಧ್ಯಕ್ಷತೆ ವಹಿಸಿದ್ದರು. ಇಮ್ತಿಯಾಝ್ ಎಂ.ಎಚ್., ಮುನಾಫ್ ಎಂ.ಎಚ್., ಸಾಹಿಲ್ ವೌಲಾನ, ಆತಿಫ್ ಎಂ.ಎಚ್, ಮುಹಮ್ಮದ್ ಆರಿಫ್ ಎಂ.ಎಚ್., ಶುಐಬ್ ಶಾಬುದ್ದೀನ್, ಸಂಸ್ಥೆಯ ಆಡಳಿತ ಮಂಡಳಿ ಮುಖ್ಯಸ್ಥರು, ಸದಸ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಯಿಶಾ ಸರ್ರಾ ಕಿರಾಅತ್ ಪಠಿಸಿದರು. ತಫ್ಸೀರಾ ಅನುವಾದಿಸಿದರು. ಆಯಿಶಾ ಸಲ್ವಾ ಹಾಗೂ ಲೈಬಾ ಎಂ.ಎಚ್. ನಅತ್ ಹಾಡಿದರು. ಅಫ್ರಾ ಇರ್ಫಾನ್ ವೌಲಾನ, ಇಫ್ರಾ ಇಬ್ರಾಹೀಂ ಎಂ.ಎಚ್. ಸ್ವಾಗತಿಸಿದರು. ಆಯಿಶಾ ಹಫ್ಸಾ ವಂದಿಸಿದರು. ಅನಮ್ ಅನ್ಸಾರ್ ಕಾರ್ಯಕ್ರಮ ನಿರೂಪಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News