ದ.ಕ.-ಉಡುಪಿ: ಅಲ್ಲಲ್ಲಿ ಸ್ವಾತಂತ್ರೋತ್ಸವ

Update: 2016-08-17 18:40 GMT

ಉಜಿರೆ ಎಸ್‌ಡಿಎಂ ಕಾಲೇಜು

 ಬೆಳ್ತಂಗಡಿ, ಆ.17: ಉಜಿರೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ವತಿಯಿಂದ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಮಾವತಿ ಹೆಗ್ಗಡೆ ಧ್ವಜಾರೋಹಣಗೈದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಬಿ.ಯಶೋವರ್ಮ, ಪ್ರಾಂಶುಪಾಲ ಪ್ರೊ. ಕೆ.ಎಸ್. ಮೋಹನ ನಾರಾಯಣ ಉಪಸ್ಥಿತರಿದ್ದರು.

ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ 

ಮೂಡುಬಿದಿರೆ, ಆ.17: ತೋಡಾರಿನಲ್ಲಿರುವ ಯೆನೆಪೊಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಪ್ರಾಂಶುಪಾಲ ಡಾ.ರಾಜೇಶ್ ಜಿ. ಡಿಸೋಜ ನೆರವೇರಿಸಿದರು.

ಕಾಲೇಜಿನ ಆಡಳಿತಾಧಿಕಾರಿ ಅಶೋಕ್ ಶೆಟ್ಟಿ, ದೈಹಿಕ ಶಿಕ್ಷಕ ಲೋಕೇಶ್, ಉಪನ್ಯಾಸಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕಾವ್ಯಾ ಕಾರ್ಯಕ್ರಮ ನಿರೂಪಿಸಿದರು.

ಎಸ್‌ಡಿಪಿಐ-ಪಿಎಫ್‌ಐ ದೇರಳಕಟ್ಟೆ ವಲಯ

ಉಳ್ಳಾಲ, ಆ.17: ಎಸ್‌ಡಿಪಿಐ ಮತ್ತು ಪಿಎಫ್‌ಐ ದೇರಳಕಟ್ಟೆ ಏರಿಯಾ ಇದರ ಜಂಟಿ ಆಶ್ರಯದಲ್ಲಿ ನಾಟೆಕಲ್ ಜಂಕ್ಷನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿಶಹೀದ್ ಕಿನ್ಯ ಧ್ವಜಾರೋಹಣಗೈದರು.

ಎಸ್‌ಡಿಪಿಐ ವತಿಯಿಂದ ನಾಟೆಕಲ್‌ನಲ್ಲಿ ನಿರ್ಮಿಸಿದ ಸಾರ್ವಜನಿಕ ಬಸ್ ತಂಗುದಾಣವನ್ನು ಅಬ್ಬಾಸ್ ಕಿನ್ಯ ಉದ್ಘಾಟಿಸಿದರು. ಮುಹಮ್ಮದ್ ತಂಝೀಲ್,ನಾಗೇಶ್ ನಾಟೆಕಲ್, ಶಾಕೀರ್ ಮೊಂಟೆಪದವು, ನೌಫಾಲ್ ಪನೀರ್, ರಿಯಾಝ್, ಸಿಯಾಬ್ ಕಿನ್ಯ, ಬದ್ರುದ್ದೀನ್ ಉಪಸ್ಥಿತರಿದ್ದರು.

ವಿಟ್ಲ ಎಸ್ಸೆಸ್ಸೆಫ್

ವಿಟ್ಲ, ಆ.17: ಎಸ್ಸೆಸ್ಸೆಫ್ ಎನ್.ಸಿ. ರೋಡ್ ಶಾಖೆಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಧ್ವಜಾರೋಹಣಗೈದರು. ಜಯರಾಜ್ ಎನ್.ಸಿ. ರೋಡ್, ಸಿ.ಎಚ್. ಮಹಮ್ಮದಲಿ ಸಖಾಫಿ, ಮುಹಮ್ಮದ್ ಅಶ್‌ಹದ್ ಸಖಾಫಿ, ಚಂದ್ರಶೇಖರ್ ರೈ, ಮುತ್ತಲಿಬ್ ಹಾಜಿ, ಅಬ್ದುಲ್ ಹಮೀದ್ ಮದನಿ, ಯಾಕೂಬ್ ದಂಡೆಮಾರ್, ನಾರಾಯಣ ಟೈಲರ್, ಹಮೀದ್ ನಾರ್ಶ, ಇಬ್ರಾಹೀಂ ಬಶೀರ್, ವಿಶ್ವಜಿತ್ ಶೆಟ್ಟಿ, ಇಬ್ರಾಹೀಂ ಖಂಡಿಗ, ಅಶ್ರಫ್ ನಾರ್ಶ, ಕರೀಂ ಕದ್ಕರ್ ಉಪಸ್ಥಿತರಿದ್ದರು.

ಕಿನ್ಯ ಹಳೆ ವಿದ್ಯಾರ್ಥಿ ಸಂಘ

  ಕಿನ್ಯ, ಆ.17: ಅಲ್ ಮದ್ರಸತುಲ್ ಕುತುಬಿಯ್ಯದಲ್ಲಿ ಎಸ್ಕೆಎಸ್‌ಬಿವಿ ಹಾಗೂ ಕುತುಬಿಯ್ಯ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷ ಹುಸೈನ್ ಕುಂಞಿ ಹಾಜಿ ಧ್ವಜಾರೋಹಣಗೈದರು. ಸೈಯದ್ ಅಮೀರ್ ತಂಙಳ್ ಕಿನ್ಯ, ಫಾರೂಕ್ ದಾರಿಮಿ, ಖಾಸಿಂ ದಾರಿಮಿ, ಅಬೂಬಕರ್ ಅಲ್ ಖಾಸಿಮಿ, ಅಬೂಸ್ವಾಲಿಹ್, ಮುಹಮ್ಮದ್, ಫಾರೂಕ್ ಕಿನ್ಯ, ರಂಶೀದ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.

ಕೃಷ್ಣಾಪುರ ಗೆಳೆಯರ ಬಳಗ

ಮಂಗಳೂರು, ಆ.17: ಕೃಷ್ಣಾಪುರದ ಗೆಳೆಯರ ಬಳಗ ಸರ್ವಿಸ್ ಸ್ಟೇಷನ್ ವತಿಯಿಂದ ಸರಫ್‌ರ ಅಧ್ಯಕ್ಷತೆಯಲ್ಲಿ ಸ್ವಾತಂತ್ರೋತ್ಸವ ಆಚರಿಸಲಾಯಿತು.

ಪುತ್ತೂರು ನಗರ ಠಾಣೆ

ಪುತ್ತೂರು, ಆ.17: ನಗರ ಠಾಣೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದಲ್ಲಿ ಠಾಣಾಧಿಕಾರಿ ಮಹೇಶ್ ಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಎಸ್ಸೈ ಅಬ್ದುಲ್ ಖಾದರ್, ಟ್ರಾಫಿಕ್ ಇನ್‌ಸ್ಪೆಕ್ಟರ್ ನಾಗರಾಜ್, ಕ್ರೈಂ ಎಸ್ಸೈ ವೆಂಕಟೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

ದಾರುನ್ನೂರ್ ಕಾಶಿಪಟ್ನ

ಮೂಡುಬಿದಿರೆ, ಆ.17: ಶಹೀದ್ ಸಿ.ಎಂ. ಅಬ್ದುಲ್ಲಾಹ್ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ ಇದರ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಇಸ್ಲಾಮಿಕ್ ಅಕಾಡಮಿ ಕಾಶಿಪಟ್ನ ಮೂಡುಬಿದಿರೆ ಇದರ ಕ್ಯಾಂಪಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾರುನ್ನೂರ್ ದಮ್ಮಾಮ್ನ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಖಾದರ್ ಮದರ್ ಇಂಡಿಯಾ ಧ್ವಜಾರೋಹಣಗೈದರು. ಅಬ್ದುಲ್ಲತೀಫ್ ಮದರ್ ಇಂಡಿಯಾ, ಅಬ್ದುರ್ರಹ್ಮಾನ್ ದಮ್ಮಾಮ್, ಕೆ.ಐ. ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಪ್ರಾಂಶುಪಾಲ ದರ್ವೇಶ್ ಹುದವಿ ಕಾಸರಗೋಡ್, ಪ್ರಾಧ್ಯಾಪಕರಾದ ನಈಮ್ ಹುದವಿ ಕೋಲಾರ, ತ್ವಾಹ ಹುದವಿ ಕಡಬ, ಫಾರೂಕ್ ಹುದವಿ ಮೈಸೂರು, ಮುಈನ್ ಹುದವಿ ಉಪ್ಪಿನಂಗಡಿ, ಇಮ್ರಾನ್ ಮಾಸ್ಟರ್ ಉಪ್ಪಿನಂಗಡಿ, ಹಾಜಿ ಮುಹಿಯುದ್ದೀನ್ ಕುಟ್ಟಿ ಕಕ್ಕಿಂಜೆ, ನವಾಝ್ ಕೋಟೆಕಾರ್, ಇಬ್ರಾಹೀಂ ಕಾರ್ನಾಡ್ ಉಪಸ್ಥಿತರಿದ್ದರು.

ಮಾಣಿ ಇರ್ಷಾದಿಯ್ಯ ಮದ್ರಸ

ಮಾಣಿ, ಆ.17: ಮಾಣಿ ಇರ್ಷಾದಿಯ್ಯ ಮದ್ರಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖತೀಬ್ ನಝೀರ್ ಅಮ್ಜದಿ ಸರಳಿಕಟ್ಟೆ ಧ್ವಜಾರೋಹಣಗೈದರು. ಉಮರುಲ್ ಫಾರೂಕ್ ರಝಾ ಅಮ್ಜದಿ ಕುಂಡಡ್ಕ ಉದ್ಘಾಟಿಸಿದರು. ವಿದ್ಯಾರ್ಥಿಗಳಾದ ಮುಫೀದ್ ಪಟ್ಲಕೋಡಿ, ದೌಲತ್ ಖಾನ್ ಹಳೀರ, ರಿಝ್ವಾನ್ ಮಾಣಿ ಭಾಷಣಗೈದರು. ಫಝಲ್ ಹಳೀರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಶೇಖಮಲೆ ಮಸೀದಿ

ಪುತ್ತೂರು, ಆ.17: ಶೇಖಮಲೆ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದರ್ರಿಸ್ ಆದಂ ಅಹ್ಸನಿ ಧ್ವಜಾರೋಹಣಗೈದರು. ಮಸೀದಿಯ ಅಧ್ಯಕ್ಷ ಸಿದ್ದೀಕ್ ಹಾಜಿ, ಕಾರ್ಯದರ್ಶಿ ಎಸ್.ಪಿ. ಬಶೀರ್ ಶೇಖಮಲೆ, ಯಂಗ್‌ಮೆನ್ಸ್ ಅಧ್ಯಕ್ಷ ಹಾರಿಸ್ ಶೇಖಮಲೆ ಮತ್ತಿತರರು ಉಪಸ್ಥಿತರಿದ್ದರು.

ಪಿಎಫ್‌ಐ ಕಡಂಬು ಘಟಕ

ವಿಟ್ಲ, ಆ.17: ಪಿಎಫ್‌ಐ ಕಡಂಬು ಘಟಕದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಿಎಫ್‌ಐ ವಲಯಾಧ್ಯಕ್ಷ ಸಿರಾಜ್ ಕಡಂಬು ಧ್ವಜಾರೋಹಣಗೈದರು. ನವಾಝ್ ಕೆ.ಎಂ. ಕಡಂಬು, ಎಸ್‌ಡಿಪಿಐ ಅಧ್ಯಕ್ಷ ಹಸೈನಾರ್ ಬಿ.ಕೆ., ಖಲಂದರ್ ಪರ್ತಿಪ್ಪಾಡಿ, ಪಿಎಫ್‌ಐ ಮುಖಂಡರಾದ ಫಾರೂಕ್ ಪಿ., ಶರೀಫ್ ಕಡಂಬು, ಅಝೀಝ್ ಕಡಂಬು ಸಿದ್ದೀಕ್, ಶಹೀದ್ ಉಪಸ್ಥಿತರಿದ್ದರು.

ಬಂಟಕಲ್ಲು: ರೋಟರಿ ಭವನ

ಶಿರ್ವ, ಆ.17: ಬಂಟಕಲ್ಲಿನ ರೋಟರಿ ಭವನದಲ್ಲಿ ಜರಗಿದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಶಿರ್ವ ಗ್ರಾಪಂ ಜಾಡಮಾಲಿ (ಸ್ವಚ್ಛತಾ ಕೆಲಸಗಾರ) ಪರಿಶಿಷ್ಟ ಪಂಗಡದ ಬಾಬು ನೆರವೇರಿಸಿ, ಇದು ತನ್ನ ಜೀವನದ ಮರೆಯಲಾಗದ ಕ್ಷಣ ಎಂದರು. ಬಸ್ರೂರು ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪ್ರೊ.ಚಂದ್ರಪ್ರಭಾ ಹೆಗ್ಡೆ ಸಂದೇಶ ನೀಡಿದರು. ರೋಟರಿ ಅಧ್ಯಕ್ಷ ಡಾ.ಅರುಣ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಡಾ.ಗುರುರಾಜ್, ರಾಜಾಪುರ ಸಾರಸ್ವತ ಯುವವೃಂದದ ಅಧ್ಯಕ್ಷ ಅನಂತರಾಮ ವಾಗ್ಲೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಬಂಟಕಲ್ಲು ಒಕ್ಕೂಟದ ಅಧ್ಯಕ್ಷೆ ಶೋಭಾ ಪಾಟ್ಕರ್, ರೊನಾಲ್ಡ್ ಡಿಸೋಜ ಉಪಸ್ಥಿತರಿದ್ದರು.

ಅಲ್ ಮದ್ರಸತುಲ್ ಅಝೀಝಿಯ್ಯ

 ಮಂಗಳೂರು, ಆ. 17: ಅಲ್ ಮದ್ರಸತುಲ್ ಅಝೀಝಿಯ್ಯ ಮದ್ರಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಝೀಝ್ ದಾರಿಮಿ ಧ್ವಜಾರೋಹಣಗೈದರು. ಸದರ್ ಮುಅಲ್ಲಿಂ ಸಿರಾಜುದ್ದೀನ್ ಅಝ್‌ಹರಿ, ಇಸ್ಮಾಯೀಲ್ ಯಮಾನಿ, ಮುಸ್ತಫಾ ದಾರಿಮಿ, ಸಿದ್ದೀಕ್ ಮುಸ್ಲಿಯಾರ್, ಉಸ್ಮಾನ್ ಹನೀಫಿ, ಉಸ್ಮಾನ್ ಜೌಹರಿ, ಕರೀಂ ಮದನಿ, ಸಿರಾಜ್ ಮದನಿ, ಅಬ್ದುಲ್ಲ ಮುಸ್ಲಿಯಾರ್, ಜಮಾಅತ್ ಅಧ್ಯಕ್ಷ ಸಿದ್ದೀಕ್ ಹಾಜಿ, ಕಾರ್ಯದರ್ಶಿ ಟಿ. ಹಸನಬ್ಬ, ಸದಸ್ಯರಾದ ಖಲಂದರ್, ಶಾಹುಲ್ ಹಮೀದ್, ಬಾವುಂಞಿ, ಇಕ್ಬಾಲ್ ಉಪಸ್ಥಿತರಿದ್ದರು.

ಉದ್ಯಾವರ ಫ್ರೆಂಡ್ಸ್ ಸರ್ಕಲ್

ಉದ್ಯಾವರ, ಆ.17: ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರದ ಹಫ್ಸಾ ಅಡಿಟೋರಿಯಂ ನಲ್ಲಿ ಸ್ವಾತಂತ್ರೋತ್ಸವದ ಅಂಗವಾಗಿ ವಿದ್ಯಾರ್ಥಿ ವೇತನ ಮತ್ತು ಸಮವಸತ್ತಗಳ ವಿತರಣೆ, ಅರ್ಹರಿಗೆ ವೈದ್ಯಕೀಯ ನೆರವು ವಿತರಣಾ ಕಾರ್ಯಕ್ರಮ ನಡೆಯಿತು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 7ನೆ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯು. ಪದ್ಮನಾಭ ಶೆಟ್ಟಿಗಾರ್ ಮತ್ತು ಕೆ.ಸದಾನಂದ ಕಾಂಚನ್ ಸ್ಮಾರಕ, ಪ್ರೌಢ ಶಾಲಾ 10ನೆ ತರಗತಿ ವಿದ್ಯಾರ್ಥಿಗಳಿಗೆ ಟಿ.ವೈ, ಶಾಬುದ್ದೀನ್ ಸ್ಮಾರಕ, ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಐರಿನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ ಹಾಗೂ ಗ್ರಾಮದ ಅರ್ಹರಿಗೆ ಮಂಜುನಾಥ್ ಉದ್ಯಾವರ ಸ್ಮಾರಕ ವೈದ್ಯಕೀಯ ನೆರವು ಹಾಗೂ ಅಬ್ದುಲ್ ಜಲೀಲ್ ಸಾಹೇಬ್ ಇವರ ಪ್ರಾಯೋಜಕತ್ವದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಲಾ ಯಿತು.

ಉದ್ಯಾವರ ಸರಕಾರಿ ಪ.ಪೂ. ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಗಾಗಿ 30,000 ರೂ. ಚೆಕ್‌ನ್ನು ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆಗೆ ಸಂಸ್ಥೆಯ ಅಧ್ಯಕ್ಷ ಯು.ಆರ್.ಚಂದ್ರಶೇಖರ್ ಹಸ್ತಾಂತರಿಸಿದರು. ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಸಂಸ್ಥೆಯ ನಿರ್ದೇಶಕ ಮುಹಮ್ಮದ್ ನಯಾಝ್, ಯು.ಪದ್ಮನಾಭ ಕಾಮತ್, ಶರತ್‌ಕುಮಾರ್, ಚಂದ್ರಾವತಿ ಎಸ್.ಭಂಡಾರಿ ಉಪಸ್ಥಿತರಿದ್ದರು.

ನಿರ್ದೇಶಕ ಉದ್ಯಾವರ ನಾಗೇಶ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಪ್ರ.ಕಾರ್ಯದರ್ಶಿ ತಿಲಕ್ ರಾಜ್ ಸಾಲ್ಯಾನ್ ವಂದಿಸಿದರು. ಹಿರಿಯ ಸದಸ್ಯ ರಮೇಶ್ ಕುಮಾರ್ ಉದ್ಯಾವರ ಕಾರ್ಯಕ್ರಮ ನಿರ್ವಹಿಸಿದರು.

ಆಟೊ ಚಾಲಕ ಮಾಲಕರ ಸಂಘ

ಬಂಟ್ವಾಳ, ಆ.17 : ತುಂಬೆ ಆಟೊ ಚಾಲಕ ಮಾಲಕರ ಸಂಘ ವತಿಯಿಂದ ತುಂಬೆ ಆಟೊ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ಲ ಧ್ವಜಾರೋಹಗೈದರು. ಆಟೊ ಚಾಲಕರಾದ ಹನೀಫ್ ಎಂ.ಎಚ್., ಖಾಲಿದ್, ಗಣೇಶ್, ಕರೀಂ, ಕಿರಣ್, ವಿಲಿಯಂ ಉಪಸ್ಥಿತರಿದ್ದರು.

ಬೆಳ್ಳಾರೆ ಝಕರಿಯಾ ಮಸೀದಿ

  ಬೆಳ್ಳಾರೆ, ಆ.17: ಇಲ್ಲಿನ ಹಿದಾಯ ತುಲ್ ಇಸ್ಲಾಂ ಮದ್ರಸ -ಝಕರಿಯಾ ಜುಮಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಂ. ರಶೀದ್ ಹಾಜಿ ಧ್ವಜಾರೋಹಣಗೈದರು. ಮುದರ್ರಿಸ್ ತಾಜುದ್ದೀನ್ ರಹ್ಮಾನಿ, ಸದರ್ ಮುಅಲ್ಲಿಂ ಶಾಫಿ ದಾರಿಮಿ ಸಂದೇಶ ಭಾಷಣ ಮಾಡಿದರು.

ಬಂಟ್ವಾಳ ಮೂಡ ಸರಕಾರಿ ಕಾಲೇಜು

ವಿಟ್ಲ, ಆ.17: ಬಂಟ್ವಾಳ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ ಧ್ವಜಾರೋಹಣ ನೆರವೇರಿ ಸಿದರು. ಕಾಲೇಜಿನ ಪ್ರಾಂಶುಪಾಲೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯರಾದ ಜಗದೀಶ ಕುಂದರ್, ಗೋಪಾಲ ಪೂಜಾರಿ ಅಲೆತ್ತೂರು, ಲೋಲಾಕ್ಷ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮುಹಮ್ಮದ್ ಗೂಡಿನಬಳಿ, ಸುಧಾಕರ ಮಡಿವಾಳ, ಶ್ರೀಧರ ಅಮೀನ್, ಸತೀಶ್ ಕುಲಾಲ್, ರಮೇಶ್ ಪೂಜಾರಿ, ಲತೀಫ್ ಖಾನ್,ಮುಹಮ್ಮದ್ ಅಶ್ರಫ್ ಜಿ.ಕೆ., ಪತ್ರಕರ್ತರಾದ ಪಿ.ಎಂ. ಅಶ್ರಫ್ ಪಾಣೆಮಂಗ ಳೂರು, ಉಪಸ್ಥಿತರಿದ್ದರು. ಅಬ್ದುರ್ರಝಾಕ್‌ಅನಂತಾಡಿ ಕಾರ್ಯಕ್ರಮ ನಿರೂಪಿಸಿ ದರು. ಉಪನ್ಯಾಸಕ ಯೂಸುಫ್ ವಂದಿಸಿದರು.

ಮುನಿಯಾಲು ಆಯುರ್ವೇದ ಕಾಲೇಜು

ಉಡುಪಿ, ಆ.17: ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ನಡೆದ ಸ್ವಾತಂತ್ಯೋತ್ಸವದ ಧ್ವಜಾರೋಹಣವನ್ನು ಜಿ. ರಘುನಾಥ ರೈ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ಡಾ. ಎಂ.ವಿ. ಶೆಟ್ಟಿ, ಪ್ರಾಂಶುಪಾಲ ಡಾ.ಸತ್ಯನಾರಾಯಣ ಬಿ. ಮತ್ತಿತರರು ಉಪಸ್ಥಿತರಿದ್ದರು.

ಮಣಿಪಾಲ ವಿಶ್ವವಿದ್ಯಾನಿಲಯ

ಮಣಿಪಾಲ ಆ.17: ಮಣಿಪಾಲ ವಿವಿ ವತಿಯಿಂದ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ವಿವಿ ಕುಲಪತಿ ಡಾ.ರಾಮದಾಸ ಎಂ.ಪೈ ನೆರವೇರಿಸಿದರು. ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ.ಸುರೇಂದ್ರ ಶೆಟ್ಟಿ ಸಂದೇಶ ನೀಡಿದರು.

ಕಾಪು ವಲಯ ಫೋಟೊಗ್ರಾಫರ್ಸ್‌ ಸಂಸ್ಥೆ

  ಕಟಪಾಡಿ, ಆ.17: ಕಾಪು ವಲಯ ಸೌತ್ ಕೆನರಾ ಫೋಟೊಗ್ರಾಫರ್ಸ್‌ ಅಸೋಸಿಯೇಶನ್ ಮತ್ತು ಸಿ.ಎ. ಬ್ಯಾಂಕ್ ಕಟಪಾಡಿ ಇದರ ಜಂಟಿ ಆಶ್ರಯದಲ್ಲಿ ಕಟಪಾಡಿ ಶಾಖೆಯಲ್ಲಿ ಜರಗಿದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಟಪಾಡಿ ಶಂಕರ ಪೂಜಾರಿ ನೆರವೇರಿಸಿದರು. ಸಿ.ಎ. ಬ್ಯಾಂಕ್ ಅಧ್ಯಕ್ಷ ಮುರಳೀಧರ್ ಪೈ, ಎಸ್‌ಕೆಪಿಎ ಕಾಪು ವಲಯ ಅಧ್ಯಕ್ಷ ಉದಯ ಮುಂಡ್ಕೂರು, ಕಾರ್ಯದರ್ಶಿ ವೀರೇಂದ್ರ ಪೂಜಾರಿ ಶಿರ್ವ, ಸಿ.ಎ. ಬ್ಯಾಂಕ್‌ನ ಪ್ರಬಂಧಕಿ ಸುಶೀಲಾ ಕರ್ಕೆರಾ ಉಪಸ್ಥಿತರಿದ್ದರು.

ಸಿದ್ದಾಪುರ ಗೂಡ್ಸ್ ವಾಹನ ಮಾಲಕ-ಚಾಲಕರ ಸಂಘ ಸಿದ್ದಾಪುರ, ಆ.17: ಇಲ್ಲಿನ ಗೂಡ್ಸ್ ವಾಹನ ಮಾಲಕರ ಮತ್ತು ಚಾಲಕರ ಸಂಘದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ನ್ಯಾಯವಾದಿ ಗುರುಮೂರ್ತಿ ನೆರವೇರಿಸಿದರು. ಸಿದ್ದಾಪುರ ಗ್ರಾಪಂ ಉಪಾಧ್ಯಕ್ಷ ಭರತ್ ಕಾಮತ್, ಉದಯ ಮಡಿವಾಳ, ಸುಧಾಕರ ಶೆಟ್ಟಿ, ಸಂಘದ ಅಧ್ಯಕ್ಷ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು.

ತಲಪಾಡಿ: ಫಲಾಹ್ ವಿದ್ಯಾಸಂಸ್ಥೆ

ತಲಪಾಡಿ, ಆ.17: ಫಲಾಹ್ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಟಿ.ಎಂ. ಅಬ್ಬಾಸ್ ಧ್ವಜಾರೋಹಣಗೈದರು. ಸಂಸ್ಥೆಯ ಕಾರ್ಯದರ್ಶಿ ಎನ್. ಅರಬಿ ಕುಂಞಿ, ಸಂಚಾಲಕ ಮುಝಫರ್ ಅಹ್ಮದ್, ಕೋಶಾಧಿಕಾರಿ ಇಸ್ಮಾಯೀಲ್ ನಾಗತೋಟ, ಉಪಾಧ್ಯಕ್ಷ ಯು.ಬಿ. ಮುಹಮ್ಮದ್, ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು: ಯುವ ವೇದಿಕೆ

ಮಂಗಳೂರು, ಆ. 17: ನಗರದ ಹಂಪನಕಟ್ಟೆಯಲ್ಲಿರುವ ಕುನಿಲ್ ಸೆಂಟರ್‌ನಲ್ಲಿ ಯುವ ವೇದಿಕೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಂದರ್ ಠಾಣಾ ನಿರೀಕ್ಷಕ ಶಾಂತರಾಮ್ ಕುಂದರ್ ಧ್ವಜಾರೊಹಣ ನೆರವೇರಿಸಿದರು.

ಶಾಸಕ ಜೆ.ಆರ್.ಲೋಬೊ, ಯುವ ವೇದಿಕೆಯ ಅಧ್ಯಕ್ಷ ಮೊಹಶಿರ್ ಅಹ್ಮದ್ ಸಾಮಣಿಗೆ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನಿಲ್‌ದಾಸ್, ಕುನಿಲ್ ಸೆಂಟರ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಕೃಷ್ಣ ಸಾಲ್ಯಾನ್, ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ನ್ಯಾಯವಾದಿ ಮಯೂರ್ ಕೀರ್ತಿ, ಲೋಕೇಶ್, ತಬ್ರೇಝ್, ರಶೀದ್ ಅಲ್ತಾಫ್, ವೇದಿಕೆಯ ಪ್ರಧಾನ ಕಾರ್ಯದರ್ಶಿ ಆದಂ ಶಾಕಿರ್, ಉಪಾಧ್ಯಕ್ಷ ಫಯಾಝ್, ಸಮೀರ್, ರಹ್ಮಾನ್, ರವೂಫ್,ರಶೀದ್ ಉಪಸ್ಥಿತರಿದ್ದರು.

ಹರೇಕಳ ಹಾಜಬ್ಬ, ಸಂಜೀವ, ರವೂಫ್ ಅವರನ್ನು ಸನ್ಮಾನಿಸಲಾಯಿತು. ಸಲಾಂ ಚುನರಿ ಕಾರ್ಯಕ್ರಮ ನಿರೂಪಿಸಿದರು.

ಯೂಸ್ಡ್ ವೆಹಿಕಲ್ ಡೀಲರ್ಸ್-ಏಜೆಂಟ್ಸ್ ಅಸೋಸಿಯೇಶನ್

ಮಂಗಳೂರು,ಆ.17: ದ.ಕ. ಜಿಲ್ಲಾ ಯೂಸ್ಡ್ ವೆಹಿಕಲ್ ಡೀಲರ್ಸ್ ಮತ್ತು ಏಜೆಂಟ್ಸ್ ಅಸೋಸಿಯೇಶನ್ ವತಿಯಿದ ನಡೆದ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ನೆರವೇರಿಸಿದರು. ಈ ಸಂದರ್ಭ ನಿವೃತ್ತ ಸೈನಿಕ ಪ್ರದೀಪ್ ಕುಮಾರ್ ಎಂ. ರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಬಿ. ಅಶೋಕ್ ಕುಮಾರ್ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಮುಹಮ್ಮದ್ ರಫೀಕ್, ಕಾರ್ಯದರ್ಶಿ ಪ್ರತಾಪ್ ಕೆ.ಎಸ್. ಮತ್ತು ಕೋಶಾಧಿಕಾರಿ ಚಂದ್ರಕಾಂತ್ ಸುವರ್ಣ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಬಶೀರ್ ಅಹ್ಮದ್ ಹಾಗೂ ಸಂಘದ ಮಾಜಿ ಗೌರವ ಅಧ್ಯಕ್ಷ ಬಿ. ವಸಂತ ಸಾಲ್ಯಾನ್ ಭಾಗವಹಿಸಿದ್ದರು.

ಜೆಪ್ಪು ಮಹಾಕಾಳಿಪಡ್ಪು ಶಾಲೆ

ಮಂಗಳೂರು, ಆ.17: ಜೆಪ್ಪುಮಹಾಕಾಳಿಪಡ್ಪುಹಿ.ಪ್ರಾ. ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಪೊರೇಟರ್ ಶೈಲಜಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಶಾಲೆಯ ಮುಖ್ಯ ಶಿಕ್ಷಕಿ ಅನಿತಾ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News