ಉಳ್ಳಾಲ: ಅಲ್ ಅಮೀನ್ ರಿಲೀಫ್ ಫೌಂಡೇಶನ್‌ನಿಂದ ಅಕ್ಕಿ ವಿತರಣೆ

Update: 2016-08-18 12:54 GMT

ಉಳ್ಳಾಲ, ಆ.18: ಅಲ್ ಅಮೀನ್ ರಿಲೀಫ್ ಫೌಂಡೇಶನ್ ಮತ್ತು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ 70ನೆ ಸ್ವಾತಂತ್ರೋತ್ಸವದ ಅಂಗವಾಗಿ ಅರ್ಹ 70 ಬಡ ಕುಟುಂಬಗಳಿಗೆ ಏಳು ಕ್ವಿಂಟಾಲ್ ಅಕ್ಕಿ ವಿತರಣಾ ಕಾರ್ಯಕ್ರಮ ಮೇಲಂಗಡಿ ಫಿರ್ದೌಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಬ್ದುಲ್ ಬುಖಾರಿ ಕಲ್ಲಾಪು ಮಾತನಾಡಿದರು. ರಿಲೀಫ್ ಫೌಂಡೇಶನ್‌ನ ಕಾರ್ಯದರ್ಶಿ ಫಾರೂಕ್ ಬೊಟ್ಟು ಅಧ್ಯಕ್ಷತೆ ವಹಿಸಿದ್ದರು.ಉಸ್ಮಾನ್ ಸಖಾಫಿ ದುಆ ನೆರವೇರಿಸಿದರು.

ಈ ಸಂದರ್ಭ ಬಾವ ಫಿರ್ದೌಸ್, ಸತ್ತಾರ್ ಮೇಲಂಗಡಿ, ಹಂಝ ಸುಂದರಿಬಾಗ್, ಬಶೀರ್ ಸಂತೋಷ ನಗರ, ಅಶ್ರಫ್ ಸುಂದರಿಬಾಗ್, ಹನೀಫ್ ಖಿಲ್ರಿಯ, ಉಸ್ಮಾನ್ ಹಾಜಿ ಅಳೇಕಲ, ಮುಝಮ್ಮಿಲ್ ಉಸ್ತಾದ್ ಉಪಸ್ಥಿತರಿದ್ದರು. ಅಬ್ದುಲ್ ಘನಿ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News