ಯುವತಿ ನಾಪತ್ತೆ

Update: 2016-08-18 18:34 GMT

ಮಂಗಳೂರು, ಆ.18: ಕೇರಳದ ರಾಜ್ಯದ ಕೊಟ್ಟಾಯಂನ ಯುವತಿ ನಾಪತ್ತೆಯಾಗಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾಗಿರುವವರನ್ನು ಅಮಲ್ದಾ ಜಾರ್ಜ್(20) ಎಂದು ಗುರುತಿಸಲಾಗಿದೆ. ಅವರು ಅ.15 ರಂದು ಬೆಳಗ್ಗೆ ಸುರತ್ಕಲ್ ಮುಕ್ಕಾದಲ್ಲಿರುವ ಶ್ರೀನಿವಾಸ ನರ್ಸಿಂಗ್ ಹಾಸ್ಟೆಲ್‌ನಿಂದ ಸ್ನೇಹಿತರ ಜೊತೆ ಹೋಗುವುದಾಗಿ ಹೇಳಿ ಹೋದವರು ಈ ವರೆಗೆ ಮರಳಿ ಹಾಸ್ಟೆಲ್‌ಗೆ ವಾಪಸ್‌ಬಾರದೆ ಕಾಣೆಯಾಗಿರುತ್ತಾರೆ.
ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಸುರತ್ಕಲ್ ಪೊಲೀಸ್ ಠಾಣೆ ದೂ.ಸ.: 0824-2220540 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News