ಅಮೆಮಾರ್ ಯಂಗ್ ಫ್ರೆಂಡ್ಸ್‌ನಿಂದ ಸನ್ಮಾನ ಕಾರ್ಯಕ್ರಮ

Update: 2016-08-19 18:22 GMT

ಬಂಟ್ವಾಳ, ಆ.19: 70ನೆ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಯಂಗ್ ಫ್ರೆಂಡ್ಸ್ ಕ್ಲಬ್ ಅಮೆಮಾರ್ ವತಿಯಿಂದ ಕಬಡ್ಡಿ ಪಂದ್ಯಾಟ, ಧ್ವಜಾರೋಹಣ, ವಿವಿಧ ಆಟೋಟ ಸ್ಪರ್ಧೆ, ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಅಮೆಮಾರ್‌ನಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೆಮಾರ್ ಬದ್ರಿಯಾ ಜುಮಾ ಅಧ್ಯಕ್ಷ ಹಾಜಿ ಉಮರಬ್ಬ ವಹಿಸಿ ಶುಭಹಾರೈಸಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೋಡಾಜೆ ಮುಖ್ಯಭಾಷಣ ಮಾಡಿದರು.

ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಎಫ್.ಮುಹಮ್ಮದ್ ಬಾವ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯೆ ಪದ್ಮಶ್ರೀ ಶೆಟ್ಟಿ, ಸಮಾಜ ಸೇವಕ ಎಫ್.ಎ.ಖಾದರ್, ಯಂಗ್ ಫ್ರೆಂಡ್ಸ್ ಕ್ಲಬ್ ಅಮೆಮಾರ್‌ನ ಅಧ್ಯಕ್ಷ ಸುಲೈಮಾನ್ ಉಸ್ತಾದ್ ಹಾಗೂ ಕ್ರೀಡಾ ಸಂಯೋಜಕ ಉಮರ್ ವಳಚ್ಚಿಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಡಾ. ಅಮೀರ್ ಅಹ್ಮದ್ ತುಂಬೆ, ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಅನ್ವರ್ ಅಮೆಮಾರ್ ಸೂಫಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಬಡ್ಡಿ ಪಂದ್ಯಾಟ ಮತ್ತು ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಶೀರ್ ತಂಡೇಲ್ ಸ್ವಾಗತಿಸಿದರು. ಶಾಫಿ ಲೀಡರ್ ಧನ್ಯವಾದಗೈದರು. ಶರೀಫ್ ಅಮೆಮಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News