ಉಳ್ಳಾಲ: ರಾಣಿ ಅಬ್ಬಕ್ಕ ಪ್ರತಿಮೆಗೆ ಅಮಿತ್ ಶಾ ಮಾಲಾರ್ಪಣೆ

Update: 2016-08-21 11:59 GMT

ಉಳ್ಳಾಲ, ಆ.21: ತಿರಂಗ ಯಾತ್ರೆ ಮತ್ತು ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದವರ ಸ್ಮರಣೆಯ ಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರವಿವಾರ ಬೆಳಗ್ಗೆ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಪ್ರತಿಮೆಗೆ ಮಾಲಾರ್ಪಣೆಗೈಯುವ ಮೂಲಕ ಬಲಿದಾನ ಸ್ಮರಣೆಗೈದರು.

ಉಳ್ಳಾಲ ಅಬ್ಬಕ್ಕ ಸರ್ಕಲ್‌ನಲ್ಲಿ ರಾಣಿ ಅಬ್ಕಕ್ಕಳ ಪ್ರತಿಮೆಯ ಬಳಿ ಸಾಗಿದ ಅಮಿತಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಸಿ.ಟಿ. ರವಿ ಹಾಗೂ ಸುನಿಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಉಳ್ಳಾಲ್ ಹಾಗೂ ರಾಣಿ ಅಬ್ಬಕ್ಕಳ ಚೌಟ ಮನೆತನದ ಕುಲದೀಪ್ ಚೌಟ ಅವರು ಸಾಥ್ ನೀಡಿದರು.

ಚೆಂಡೆ ನೃತ್ಯ ಪ್ರದರ್ಶನದ ಮೂಲಕ ಅಮಿತ್ ಶಾ ಅವರನ್ನು ಸ್ವಾಗತಿಸಲಾಯಿತು. ಕೆಎ-19ಎಂಇ ಬೆಂಝ್ ಕಾರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆಗೆ ಆಗಮಿಸಿದ ಶಾ 11:04ಕ್ಕೆ ಅಬ್ಬಕ್ಕ ಸರ್ಕಲ್ ತಲುಪಿದರು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಹಾಜಿ ಕೆ.ಎ. ಮುನೀರ್ ಬಾವ, ಡಾ.ಭರತ್, ಉಳ್ಳಾಲ ದರ್ಗಾ ಅಧ್ಯಕ್ಷ ಅಬುರ್ರಶೀದ್ ಹಾಜಿ, ಉಳ್ಳಾಲ ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್, ರಾಣಿ ಅಬಕ್ಕ ಪುತ್ಥಳಿ ನಿರ್ಮಾತೃ ಸೀತಾರಾಮ ಬಂಗೇರ ಕೊಲ್ಯ, ಜಗದೀಶ್ ಅಧಿಕಾರಿ, ಉಳ್ಳಾಲ ನಗರ ಪಂಚಾಯತ್ ಕೌನ್ಸಿಲರ್ ಸೂರ್ಯಕಲಾ, ಮಾಜಿ ಕೌನ್ಸಿಲರ್ ಲಲಿತಾ ಸುಂದರ್, ಗೋಪಾಲ ಶೆಟ್ಟಿ ಅರಿಬೈಲು, ಸುವಾಸಿನಿ ಬಬ್ಬುಕಟ್ಟೆ, ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್, ಬಿಜೆಪಿ ಮಂಗಳೂರು ಕ್ಷೇತ್ರ ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್, ಪ್ರಧಾನ ಕಾರ್ಯದರ್ಶಿ ಮನೋಜ್ ಆಚಾರ್ಯ ಹಾಗೂ ಮೋಹನ್‌ರಾಜ್ ಕೆ.ಆರ್., ಉಪಾಧ್ಯಕ್ಷ ಪ್ರಕಾಶ್ ಸಿಂಪೋನಿ, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಟ್ಟಿ ಮಾಡೂರು, ಉಪಾಧ್ಯಕ್ಷ ಸುದರ್ಶನ್ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಿತ್ ಮಾಡೂರು, ಗೋಪಾಲ ಕುತ್ತಾರು, ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News